(ಸಾಂದರ್ಭಿಕ ಚಿತ್ರ)
ಬೆಳಗಾವಿ: ತಾಲ್ಲೂಕಿನ ಯಳ್ಳೂರು ಗ್ರಾಮದಲ್ಲಿ ಸೋಮವಾರ ಕೇವಲ ₹500 ಹಣಕ್ಕಾಗಿ ಸ್ನೇಹಿತನನ್ನು ಹೊಡೆದು ಕೊಲೆ ಮಾಡಲಾಗಿದೆ.
ಯಳ್ಳೂರು ನಿವಾಸಿ ಹುಸೇನ್ ತಾಸೇವಾಲೆ (45) ಕೊಲೆಯಾದವರು. ಇದೇ ಊರಿನ ಮಿಥುನ್ ತುಬಚಿ ಹಾಗೂ ವಿನೋದ್ ಇಂಗಳೆ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಮೂವರೂ ಸ್ನೇಹಿತರಾಗಿದ್ದು, ಕೆಲವು ವರ್ಷಗಳಿಂದ ಗುಜರಿ ವ್ಯಾಪಾರ ಮಾಡುತ್ತಿದ್ದರು. ಕೊಲೆಯಾದ ಹುಸೇನ್ ₹500 ಬಾಕಿ ಕೊಡುವುದಿತ್ತು. ಇದೇ ಕಾರಣಕ್ಕೆ ಜಗಳ ತೆಗೆದು ಇಬ್ಬರೂ ಹಿಂದಿನ ದಿನ ಹುಸೇನ್ ಮನೆಗೆ ನುಗ್ಗಿ ಮನಸೋ ಇಚ್ಚೆ ಥಳಿಸಿದ್ದರು. ಮನೆಯಲ್ಲಿದ್ದ ಹುಸೇನ್ ಅವರ ತಾಯಿ ಬಿಡಿಸಿಕೊಳ್ಳಲು ಬಂದರೂ ಅವರನ್ನು ತಳ್ಳಿ ಮಾರಣಾಂತಿಕ ಹಲ್ಲೆ ಮಾಡಿದ್ದರು.
ಗಾಯಗೊಂಡ ಹುಸೇನ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಕೊನೆಯುಸಿರೆಳೆದರು. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.