
ಪ್ರಜಾವಾಣಿ ವಾರ್ತೆ
ಉಗರಗೋಳದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಶನಿವಾರ ಭೂಮಿಪೂಜೆ ನೆರವೇರಿಸಿದರು
ಉಗರಗೋಳ: ‘ಗ್ರಾಮೀಣ ಪ್ರದೇಶದಲ್ಲಿ ರೈತರು ಕೃಷಿಭೂಮಿಗೆ ತೆರಳುವ ಪ್ರತಿ ರಸ್ತೆಯನ್ನು ಹಂತ–ಹಂತವಾಗಿ ಅಭಿವೃದ್ಧಿಚಪಡಿಸಲಾಗುವುದು’ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹3.11 ಕೋಟಿ ವೆಚ್ಚದಲ್ಲಿ, ಉಗರಗೋಳದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಟಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ಧನಗೌಡ ಗೂಡರಾಶಿ, ನಿಂಗನಗೌಡ ಹರಳಕಟ್ಟಿ, ಪರಶುರಾಮ ಇಮ್ರಾಪುರ, ನೀಲಪ್ಪ ಶಿದ್ದಕ್ಕನವರ, ಗೋವಿಂದಗೌಡ ತಿಪರಾಶಿ, ಮಂಜು ಗುಡೆನ್ನವರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.