ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಮಂಗಳವಾರ ನಡೆದ ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಗಹಿಸಿದ ಕಾರಣ ಬಾಲಕನ ಬೆರಳುಗಳು ಸುಟ್ಟಿವೆ. ವಿದ್ಯುತ್ ಸ್ಪರ್ಶದಿಂದ ಒದ್ದಾಡುತ್ತಿದ್ದ ಬಾಲಕನನ್ನು ಜನರೇ ರಕ್ಷಿಸಿದ್ದಾರೆ. ಅಪಾರ ಜನ ಸೇರಿದ್ದ ವೇಳೆಯೇ ವಿದ್ಯುತ್ ಪ್ರವಹಿಸಿದ್ದು ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.
ಪಟ್ಟಣದ ನಿವಾಸಿ ಅರುಣ ಸೋಮಲಿಂಗಪ್ಪ ಕೆಂಚರಾಹುತ (12) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಪೇಟೆ ಓಣಿಯಲ್ಲಿ ಮೊಹರಂ ಅಂಗವಾಗಿ ಡೋಲಿಗಳ ಮೆರವಣಿಗೆ ಸಾಗಿತ್ತು. ಬಾಲಕ ಅರುಣ ಅರಿಯದೇ ವಿದ್ಯುತ್ ಕಂಬ ಮುಟ್ಟಿದ. ಬಾಲಕ ಒದ್ದಾಡುವುದನ್ನು ಕಂಡು ಪಕ್ಕದ ಜನ ಸಮಯಪ್ರಜ್ಞೆ ಮೆರೆದು ಪ್ಲಾಸ್ಟಿಕ್ ಸಹಾಯದಿಂದ ಬಾಲಕನ್ನು ಕಂಬದಿಂದ ಬಿಡಿಸಿದರು.
ಮೆರವಣಿಗೆ ವೇಳೆಯೂ ವಿದ್ಯುತ್ ಪ್ರಸಾರ ಮಾಡಿದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.