ಬಿಡಿಸಿಸಿ ಬ್ಯಾಂಕಿಗೆ ಭಾನುವಾರ ಜರುಗಿದ ಮತದಾನದ ಬಳಿಕ ಹುಕ್ಕೇರಿಯಲ್ಲಿ ಶಾಸಕ ನಿಖಿಲ್ ಕತ್ತಿ ನೇತೃತ್ವದಲ್ಲಿ ರಮೇಶ ಕತ್ತಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು
ಹುಕ್ಕೇರಿ: ಬಿಡಿಸಿಸಿ ಬ್ಯಾಂಕಿನ ಹುಕ್ಕೇರಿ ಕ್ಷೇತ್ರದ ಫಲಿತಾಂಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೂ ರಮೇಶ ಕತ್ತಿ ಅವರು 9ನೇ ಬಾರಿಗೆ ಗಲ್ಲಲಿದ್ದಾರೆ ಎಂಬ ಭರವಸೆಯಿಂದ ಶಾಸಕ ನಿಖಿಲ್ ಕತ್ತಿ ನೇತೃತ್ವದಲ್ಲ ವಿಜಯೋತ್ಸವ ಆಚರಿಸಲಾಯಿತು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ ಮುನ್ನೋಳಿ, ನಿರ್ದೇಶಕರಾದ ಪೃಥ್ವಿ ಕತ್ತಿ, ಕೆಂಪಣ್ಣ ದೇಸಾಯಿ, ಸತ್ಯಪ್ಪ ನಾಯಿಕ, ಹುಕ್ಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಮುಖಂಡರಾದ ಸಂಜಯ ನಿಲಜಗಿ, ಪ್ರಜ್ವಲ್ ನಿಲಜಗಿ, ಗುರುರಾಜ ಕುಲಕರ್ಣಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ನಿರ್ದೇಶಕ ಶೀತಲ್ ಬ್ಯಾಳಿ, ಚನ್ನಪ್ಪ ಗಜಬರ್ ಇತರರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.