ಹೈಕೋರ್ಟ್ ಆದೇಶ
ಚನ್ನಮ್ಮನ ಕಿತ್ತೂರು: ಬಾಲಕಿಯೊಬ್ಬಳ ಮೇಲೆ 2019ರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬೆಳಗಾವಿಯ ಹೆಚ್ಚುವರಿ ತ್ವರಿತ ಗತಿಯ ಜಿಲ್ಲಾ ಮತ್ತು ಸೆಷನ್ಸ್ ಪೋಕ್ಸೊ ನ್ಯಾಯಾಲಯವು ಐವರಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಮುಖ ಆರೋಪಿ, ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ಉಪರಿಯ ಪ್ರವೀಣ ರಾಜೇಂದ್ರ ಬೆಡಕಿಹಾಳಗೆ 12 ವರ್ಷ ಕಠಿಣ ಶಿಕ್ಷೆ ಹಾಗೂ ₹15 ಸಾವಿರ ದಂಡ, ನಂತರದ ಆರೋಪಿಗಳಾದ ಕಿತ್ತೂರಿನ ಸದ್ಯ ಗೋಕಾಕದಲ್ಲಿ ವಾಸವಾಗಿರುವ ಲಕ್ಷ್ಮಿ ಮಾಂತೇಶ ಕರಬಿ, ಖಾನಾಪುರ ತಾಲ್ಲೂಕಿನ ತೋಲಗಿಯ ರೇಣುಕಾ ಬಸಪ್ಪ ಸಾಮ್ರಾಣಿ, ನಿಪ್ಪಾಣಿ ತಾಲ್ಲೂಕಿನ ಕುಣ್ಣೂರಿನ ನಿರ್ಮಾಲಾ ಶರದ್ ಮಗದುಮ್ ಅವರಿಗೆ 8 ವರ್ಷ ಕಠಿಣ ಶಿಕ್ಷೆ ಹಾಗೂ ಇದೇ ತಾಲ್ಲೂಕಿನ ಜನವಾಡ ಗ್ರಾಮದ ಮಹಾವೀರ ರಾಜಾರಾಮ ಶಮನೇವಾಡಿಗೆ ಎರಡು ವರ್ಷ ಸಾದಾ ಶಿಕ್ಷೆ ಮತ್ತು ₹5000 ದಂಡ ವಿಧಿಸಿ ನ್ಯಾಯಾಧೀಶರಾದ ಪುಷ್ಟಲತಾ ಅವರು ತೀರ್ಪು ನೀಡಿದ್ದಾರೆ.
ಅಂದಿನ ಬೈಲಹೊಂಗಲ ಎಎಸ್‌ಪಿ ಆಗಿದ್ದ ಪ್ರದೀಪ ಗುಂಟಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಬಾಹುಬಲಿ ಅಗಸಿಮನಿ ಎಲ್ಲ ಸಾಕ್ಷಿದಾರರನ್ನು ಕೋರ್ಟ್ ಎದುರು ಹಾಜರು ಪಡಿಸಿದ್ದರು. ಸರ್ಕಾರಿ ಅಭಿಯೋಜಕ ಎಲ್. ವಿ. ಪಾಟೀಲ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.