
ಚಿಕ್ಕೋಡಿ: ಪಟ್ಟಣದ ಮಿನಿವಿಧಾನಸೌಧದ ಎದುರಿನಲ್ಲಿ ಕನಾಟಕ ಜೈನ ಸಮಾಜ ಹಿತರಕ್ಷಣಾ ಒಕ್ಕೂಟ ಚಿಕ್ಕೋಡಿ ತಾಲ್ಲೂಕು ಘಟಕದ ವತಿಯಿಂದ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಜಿಲ್ಲೆಗೊಂದು ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಜೈನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಜೈನ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ, ಪ್ರಾಚೀನ ಜೈನ ಬಸದಿಗಳಿಗೆ ರಕ್ಷಣೆ, ಸುರಕ್ಷತಾ ಸಿಬ್ಬಂದಿ ನೇಮಕ, ಅಲ್ಪಸಂಖ್ಯಾತರ ಮೀಸಲಾತಿಯಲ್ಲಿ ಜೈನರ ಮೀಸಲಾತಿಯನ್ನು ಶೇ5ರಿಂದ ಶೇ 20ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು.
ಜೈನ ಸಮುದಾಯದ ಮುಖಂಡರಾದ ಮಹೇಶ ಕಾಸಾರ, ವಿನುತಾಯಿ ಚೌಗಲಾ, ಪಚ್ಚೇಶ ಆನೇಕರ, ಮಾನಿಕ ರೊಟ್ಟಿ ಉಪವಾಸ ಸತ್ಯಾಗ್ರಹ ಮಾಡಿದರು. ಪ್ರತಿಭಟನೆಯಲ್ಲಿ ಸಂಜಯ ನಾಡಗೌಡ, ರಾವಸಾಹೇಬ ಪಾಟೀಲ, ಪವನ ಮಹಾಜನ, ವೃಷಭ ಬಾಳಿಕಾಯಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.