ಕೆ.ರಾಮರಾಜನ್
ಬೆಳಗಾವಿ: ‘ಜಿಲ್ಲೆಯ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ ₹400 ಕೋಟಿ ದರೋಡೆ ಪ್ರಕರಣದ ಕುರಿತು ಇದೂವರೆಗೆ ಯಾರೂ ದೂರು ಕೊಟ್ಟಿಲ್ಲ. ಬಾಯಿ ಮಾತಿನ ಹೇಳಿಕೆಗಳೆಲ್ಲವೂ ನಿಜ ಎಂದು ನಂಬಲಾಗುವುದಿಲ್ಲ. ಕೃತ್ಯ ನೋಡಿದವರು ಅಥವಾ ಹಣ ಕಳೆದುಕೊಂಡವರಲ್ಲಿ ಯಾರಾದರೂ ದೂರು ನೀಡಿದರೆ ಪರಿಶೀಲಿಸುತ್ತೇವೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪುನರುಚ್ಚರಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ‘ಘಟನೆ ಬಗ್ಗೆ ಇನ್ಯಾರೋ ತನಿಖೆ ನಡೆಸಿ ಎಂದು ಆಗ್ರಹಿಸಲು ಬರುವುದಿಲ್ಲ. ಇದು ಎಷ್ಟು ಸತ್ಯ ಎಂಬ ಬಗ್ಗೆ ನಾವು ಪರಿಶೀಲನೆ ನಡೆಸುವುದು ಪ್ರಾಥಮಿಕ ಕೆಲಸ. ಆದರೆ, ದೂರೇ ಇಲ್ಲದೆ ಏನು ಮಾಡಲಾಗುವುದಿಲ್ಲ’ ಎಂದರು.
‘ಮಹಾರಾಷ್ಟ್ರ ಸರ್ಕಾರ ಇದಕ್ಕೆ ಏಕೆ ವಿಶೇಷ ತನಿಖಾ ತಂಡ ರಚನೆ ಮಾಡಿದೆ ಎಂಬುದಕ್ಕೆ ಆ ಸರ್ಕಾರವೇ ವಿವರಣೆ ಕೊಡಬೇಕು. ಈವರೆಗೂ ನಮ್ಮ ಅಧಿಕಾರಿಗಳು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಇದರ ಬಗ್ಗೆ ಮಹಾರಾಷ್ಟ್ರದ ಅಧಿಕಾರಿಗಳು ನೀಡಿದ ಮಾಹಿತಿ ಅಪೂರ್ಣವಿದೆ. ಇನ್ನಷ್ಟು ಮಾಹಿತಿ ಬೇಕು ಎಂದಷ್ಟೇ ನಾವು ಉತ್ತರಿಸಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.