ADVERTISEMENT

‘ಅಪರಾಧ ತಡೆ: ನಾಗರಿಕರ ಸಹಕಾರ ಅಗತ್ಯ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 14:07 IST
Last Updated 15 ಡಿಸೆಂಬರ್ 2019, 14:07 IST
ಅಥಣಿಯ ಜೆ.ಎ. ಪದವಿಪೂರ್ವ ಕಾಲೇಜಿನಲ್ಲಿ ಪೋಲಿಸ್ ಇಲಾಖೆ ಹಮ್ಮಿಕೊಂಡಿದ್ದ ‘ಅಪರಾಧ ತಡೆ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಪಿಎಸ್ಐ ಯು.ಎಸ್. ಅವಟಿ ಮಾತನಾಡಿದರು
ಅಥಣಿಯ ಜೆ.ಎ. ಪದವಿಪೂರ್ವ ಕಾಲೇಜಿನಲ್ಲಿ ಪೋಲಿಸ್ ಇಲಾಖೆ ಹಮ್ಮಿಕೊಂಡಿದ್ದ ‘ಅಪರಾಧ ತಡೆ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಪಿಎಸ್ಐ ಯು.ಎಸ್. ಅವಟಿ ಮಾತನಾಡಿದರು   

ಅಥಣಿ: ‘ಅಪರಾಧ ತಡೆಯುವಲ್ಲಿ ಪೊಲೀಸರಿಗೆ ನಾಗರಿಕರು ಸಹಕಾರ ನೀಡಬೇಕು. ಅಂತೆಯೇ, ಪ್ರತಿಯೊಬ್ಬರೂ ಜಾಗರೂಕರಾಗಿಬೇಕು’ ಎಂದು ಇಲ್ಲಿನ ಠಾಣೆಯ ಪಿಎಸ್ಐ ಯು.ಎಸ್. ಅವಟಿ ತಿಳಿಸಿದರು.

ಜೆ.ಎ. ಪದವಿಪೂರ್ವ ಕಾಲೇಜಿನಲ್ಲಿ ಪೋಲಿಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ‘ಅಪರಾಧ ತಡೆ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೊಲೀಸರು ಸಾಕಷ್ಟು ಜಾಗೃತಿ ವಹಿಸುತ್ತಿದ್ದರೂ ನಾಗರಿಕರ ಅಸಡ್ಡೆಯಿಂದಾಗಿ ಹಲವಾರು ಪ್ರಕರಣಗಳು ಜರುಗುತ್ತಿವೆ. ಮುಂಜಾನೆ, ಸಂಜೆ ಒಬ್ಬೊಬ್ಬರೇ ವಾಯುವಿಹಾರಕ್ಕೆ ಹೋಗಬಾರದು. ಅದರಲ್ಲೂ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸಬೇಕು. ಅಪರಿಚಿತರು ಮಾತನಾಡಿಸಿದರೆ ಅವರಿಂದ ದೂರವಿರಬೇಕು. ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಲೈಂಗಿಕ ದೌರ್ಜನ್ಯಗಳನ್ನು ಸಹಿಸಿಕೊಳ್ಳಬಾರದು. ಭಯಪಡದೇ ನೇರವಾಗಿ ಠಾಣೆಗೆ ದೂರು ನೀಡಬೇಕು ಅಥವಾ ಸಂಬಂಧಿಸಿದ ಕಾಲೇಜಿನವರಿಗೆ ತಿಳಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಗೌಡರ ಮಾತನಾಡಿದರು. ಉಪನ್ಯಾಸಕಿ ಪಿ.ಎಂ. ಹುಲಗಬಾಳಿ, ಬಿ.ಎಸ್. ಲೋಕೂರ, ಆರ್.ಎಸ್. ದೊಡ್ಡನಿಂಗಪ್ಪಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.