ADVERTISEMENT

ರೈತರ ಅಭಿವೃದ್ದಿಗೆ ಸಹಕಾರಿ ಸಂಘ ಪೂರಕ: ಶಾಸಕ ಮಹಾಂತೇಶ ಕೌಜಲಗಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 14:22 IST
Last Updated 10 ಸೆಪ್ಟೆಂಬರ್ 2024, 14:22 IST
ಬೈಲಹೊಂಗಲ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಂ.1ರ (ಎಲ್ಎಸ್ಎಂಪಿ) 85ನೇ ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಶಾಸಕ ಮಹಾಂತೇಶ ಕೌಜಲಗಿ, ಹಿರಿಯರಾದ ಮಲ್ಲಿಕಾರ್ಜುನ ಬೋಳನ್ನವರ, ಪಾಂಡಪ್ಪ ಇಂಚಲ, ಬಸಣ್ಣ ಮೂಗಿ ಬಾಗವಹಿಸಿದ್ದರು
ಬೈಲಹೊಂಗಲ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಂ.1ರ (ಎಲ್ಎಸ್ಎಂಪಿ) 85ನೇ ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಶಾಸಕ ಮಹಾಂತೇಶ ಕೌಜಲಗಿ, ಹಿರಿಯರಾದ ಮಲ್ಲಿಕಾರ್ಜುನ ಬೋಳನ್ನವರ, ಪಾಂಡಪ್ಪ ಇಂಚಲ, ಬಸಣ್ಣ ಮೂಗಿ ಬಾಗವಹಿಸಿದ್ದರು   

ಬೈಲಹೊಂಗಲ: ‘ಸರ್ಕಾರಿ ಯೋಜನೆಗಳನ್ನು ರೈತರಿಗೆ ಮುಟ್ಟಿಸುತ್ತಿರುವದರಿಂದ ಸಹಕಾರಿ ಸಂಘಗಳು ರೈತರ ಅಭಿವೃದ್ದಿಗೆ ಪೂರಕವಾಗಿದೆ’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಂ.1ರ (ಎಲ್ಎಸ್ಎಂಪಿ) 85ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತ‌ನಾಡಿದರು.

‘ಸಂಘವು ₹15 ಕೋಟಿ ಬಂಡವಾಳದೊಂದಿಗೆ ರೈತರಿಗೆ ನೆರವಾಗುತ್ತಾ, 28 ಲಕ್ಷ ಮಿಕ್ಕಿ ಲಾಭ ಹೊಂದಿ, ರೈತ ಸದಸ್ಯರಿಗೆ ಶೇ 10 ಡಿವಿಡಂಡ್ ನೀಡುತ್ತಿರುವದು ಆಡಳಿತ ಮಂಡಳಿ, ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮಕ್ಕೆ ಸಾಕ್ಷಿಯಾಗಿದೆ’ ಎಂದರು.

ADVERTISEMENT

ರೈತ ಮುಖಂಡ ಶಂಕರೆಪ್ಪ ಯಡಳ್ಳಿ ಮಾತನಾಡಿ, ‘ಅನ್ನ ನೀಡುವ ರೈತರ ಅಭಿವೃದ್ದಿಯೇ ದೇಶದ ಅಭಿವೃದ್ದಿಯಾಗಿದ್ದು, ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು' ಎಂದರು.

ಸಾವಯವ ಕೃಷಿಕ ಬಾಬು ಪಾಟೀಲ, ನಿವೃತ್ತ ಶಿಕ್ಷಕ ಬಸವರಾಜ ಭರಮಣ್ಣವರ, ಪ್ರಗತಿಪರ ರೈತ ಪುಂಡಲೀಕ ಇಂಚಲ ಸಲಹೆ ಸೂಚನೆ ನೀಡಿದರು.

ಸಂಘದ ವ್ಯವಸ್ಥಾಪಕ ಬಸವರಾಜ ವಾಲಿ ವರದಿ ಮಂಡಿಸಿ, ಸಂಘವು ₹10 ಕೋಟಿ ಸಾಲ ವಿತರಿಸಿದೆ. ₹1 ಕೋಟಿ 40 ಲಕ್ಷ ಷೇರು ಬಂಡವಾಳ ಹೊಂದಿದೆ. ಸಂಘದಿಂದ ಬೀಜ, ಗೊಬ್ಬರ ವಿತರಿಸಲು ಕೇಂದ್ರ ಸರ್ಕಾರದಿಂದ ಲೈಸನ್ಸ್ ಹೊಂದಲಾಗುತ್ತಿದ್ದು, ಶಿಘ್ರ ಪ್ರಾರಂಭಿಸಲಾಗುವುದು ಎಂದರು.

ನಿರ್ದೇಶಕ ಬಸವರಾಜ ಕಲಾದಗಿ ಮಾತನಾಡಿದರು. ಸಂಘದ ಅಧ್ಯಕ್ಷ ಪಾಂಡಪ್ಪ ಇಂಚಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.

ಹಿರಿಯರಾದ ಮಲ್ಲಿಕಾರ್ಜುನ ಬೋಳನ್ನವರ, ಶಂಕರೆಪ್ಪ ತುರಮರಿ, ಮರ್ಚಂಟ್ಸ್ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೂಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಡಿಸಿಸಿ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಶಿವನಗೌಡ ಮುದಕನಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.