ADVERTISEMENT

ತೆಲಸಂಗ: ಎಸ್‌.ಪಿ. ಬಾಲಸುಬ್ರಹ್ಮಣ್ಯಂಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 12:07 IST
Last Updated 26 ಸೆಪ್ಟೆಂಬರ್ 2020, 12:07 IST
ತೆಲಸಂಗ ಗ್ರಾಮದಲ್ಲಿ ಗೆಳೆಯರ ಬಳಗದಿಂದ ಶನಿವಾರ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ತೆಲಸಂಗ ಗ್ರಾಮದಲ್ಲಿ ಗೆಳೆಯರ ಬಳಗದಿಂದ ಶನಿವಾರ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ತೆಲಸಂಗ: ‘ಎಸ್.ಪಿ. ಬಾಲಸುಬ್ರಹ್ಮಣ್ಯ ಅವರು ತಮ್ಮ ಹಾಡುಗಳ ಮೂಲಕ ಸಂಗೀತ ರಸಿಕರ ಮನಸ್ಸಿನಲ್ಲಿ ಉಳಿದಿದ್ದಾರೆ’ ಎಂದು ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯ ಅಪ್ಪುರಾಜ ಭಜಂತ್ರಿ ಹೇಳಿದರು.

ಗ್ರಾಮದಲ್ಲಿ ಗೆಳೆಯರ ಬಳಗದಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘50 ವರ್ಷ ಗಾಯನ ಮತ್ತು ನಟನೆಯಲ್ಲಿ ತೊಡಗಿದ್ದ ಕಲಾ ಆರಾಧಕ ಅವರು. ಕಲಾವಿದರಿಗೆ ಅವರು ಮಾದರಿಯಾಗಿದ್ದಾರೆ’ ಎಂದರು.

ADVERTISEMENT

ಗಾಯಕರಾದ ರಾಜು ಹೊನಕಾಂಬಳೆ, ಗಣೇಶ ಪಟ್ಟಣ, ಧರೆಪ್ಪ ಮಾಳಿ, ಮಹ್ಮದ ಮುಲ್ಲಾ, ಗಪೂರ ಮುಲ್ಲಾ ಮಾತನಾಡಿದರು.

ನಿವೃತ್ತ ಸೈನಿಕರಾದ ಬಸವರಾಜ ಬಿಜ್ಜರಗಿ, ಸುಭಾಸ್ ಖೊಬ್ರಿ, ಸಿದ್ದಲಿಂಗ ಮಾದರ, ಸುಖದೇವ ಮೋರೆ, ಆನಂದ ಥೈಕಾರ, ಪ್ರಶಾಂತ ಪಡಸಲಗಿ, ಪವನ
ಶಿಂಧೆ, ರಾಜು ಸಾಗರ, ಮಹೇಶ ಕುಂಬಾರ, ಸುನೀಲ ಮಾದರ, ಬುರಾನ ಅರಟಾಳ, ಅಸ್ಕರ ಮುಜಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.