ADVERTISEMENT

‘ಬೆಳಗಾವಿ ಗ್ರಾಮೀಣ: ಕಾಂಗ್ರೆಸ್‌ ಬೆಂಬಲಿತರಿಗೆ 381 ಸ್ಥಾನ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 15:39 IST
Last Updated 31 ಡಿಸೆಂಬರ್ 2020, 15:39 IST
 ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಗ್ರಾಮೀಣ ವಿಧಾನಸಭಾ ಕ್ಷೇತ್ರದ 731 ಗ್ರಾಮ ಪಂಚಾಯಿತಿ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 381 ಸ್ಥಾನ ಪಡೆದಿದ್ದು, ಸುಮಾರು 35 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದ್ದಾರೆ.

‘ಬಿಜೆಪಿ ಬೆಂಬಲಿಗರು 225 ಸ್ಥಾನ ಪಡೆದಿದ್ದಾರೆ. ಎಂಇಎಸ್ 125 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಶೇ. 52ಕ್ಕಿಂತ ಹೆಚ್ಚು ಸ್ಥಾನಗಳು ಕಾಂಗ್ರೆಸ್ ಬೆಂಬಲಿಗರ ಪಾಲಾಗಿವೆ. ಬಿಜೆಪಿ ಬೆಂಬಲಿಗರು ಶೇ.30ರಷ್ಟು ಸ್ಥಾನ ಪಡೆದಿದ್ದಾರೆ. ಎಂಇಎಸ್ ಶೇ.17ರಷ್ಟು ಸ್ಥಾನ ಗೆದ್ದಿದೆ’ ಎಂದು ಮಾಹಿತಿ ಬಿಡುಗಡೆ ಮಾಡಿದ್ದಾರೆ.

‘ಕರಡಿಗುದ್ದಿಯಲ್ಲಿ 8, ವಾಘವಾಡೆ– 12, ಮೋದಗಾ– 15, ಅಂಬೆವಾಡಿ– 8, ಅರಳಿಕಟ್ಟಿ– 6, ಅಂಕಲಗಿ– 11, ಬಸ್ತವಾಡ–17, ಬಡಸ್– 6, ಬಾಳೇಕುಂದ್ರಿ– 12, ಬೆಂಡಿಗೇರಿ– 7 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿಗರು ಗೆದ್ದಿದ್ದಾರೆ. ಬೆಕ್ಕಿನಕೇರಿ– 3, ಬೆನಕನಳ್ಳಿ– 23, ಬೆಳಗುಂದಿ–8, ದೇಸೂರು– 4, ಹಲಗಾ– 10, ಹಿಂಡಲಗಾ– 7, ಹಿರೇಬಾಗೇವಾಡಿ– 23, ಕಂಗ್ರಾಳಿ ಬಿ.ಕೆ.–12, ಕಂಗ್ರಾಳಿ ಕೆ.ಎಚ್ –4, ಕುದ್ರೆಮನಿ– 6, ಕಿಣಿಯೆ– 9, ಕೆ.ಕೆ. ಕೊಪ್ಪ– 12, ಉಚಗಾವಿ– 14, ತುಮ್ಮರಗುದ್ದಿ– 6 ಸ್ಥಾನಗಳು ಕಾಂಗ್ರೆಸ್ ಬೆಂಬಲಿಗರ ಪಾಲಾಗಿವೆ. ಮಂಡೋಳಿ– 6, ಮುತಗಾ– 8, ಮುತ್ನಾಳ– 6, ಮಾರಿಹಾಳ– 11, ಮಾಸ್ತಮರ್ಡಿ– 9, ನಿಲಜಿ– 7, ನಂದಿಹಳ್ಳಿ– 5, ಸಂತಿಬಸ್ತವಾಡ– 8, ಸಾಂಬ್ರಾ– 15, ಸುಳಗಾ ಯು– 12, ಸುಳಗಾ ವೈ – 3, ಸುಳೇಭಾವಿ– 18, ತಾರಿಹಾಳ– 12, ತುರಮುರಿ–8, ಕಣಗಾಂವ್– 2, ಬಾಳೆಕುಂದ್ರಿ ಕೆ.ಎಚ್.– 8 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಗೆದ್ದಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ನಾನು ನಿಖರ ಮಾಹಿತಿ ಸಂಗ್ರಹಿಸಿ ಬಿಡುಗಡೆ ಮಾಡಿದ್ದೇನೆ. ಆದರೆ, ಬಿಜೆಪಿಯವರು ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸುಳ್ಳು ಹೇಳುವುದೇ ಅವರ ಸಂಸ್ಕೃತಿಯಾಗಿದೆ’ ಎಂದು ಲಕ್ಷ್ಮಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.