ADVERTISEMENT

ಸಹಕಾರ ಕ್ಷೇತ್ರಕ್ಕೆ ಭದ್ರಬುನಾದಿ ಹಾಕಿದ ಅಪ್ಪಣಗೌಡರು: ಪೃಥ್ವಿ ಕತ್ತಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 3:16 IST
Last Updated 24 ಅಕ್ಟೋಬರ್ 2025, 3:16 IST
ಹುಕ್ಕೇರಿ ಗ್ರಾಮೀನ ವಿದ್ಯುತ್ ಸಹಕಾರ ಸಂಘದ ಕಚೇರಿಯಲ್ಲಿ ದಿ.ಅಪ್ಪಣ್ಣಗೌಡರ 51ನೇ ಪುಣ್ಯತಿಥಿ ನಿಮಿತ್ಯ ಅವರ ಪುತ್ಥಳಿಗೆ ಪೂಜೆ ನೆರವೇರಿಸಲಾಯಿತು
ಹುಕ್ಕೇರಿ ಗ್ರಾಮೀನ ವಿದ್ಯುತ್ ಸಹಕಾರ ಸಂಘದ ಕಚೇರಿಯಲ್ಲಿ ದಿ.ಅಪ್ಪಣ್ಣಗೌಡರ 51ನೇ ಪುಣ್ಯತಿಥಿ ನಿಮಿತ್ಯ ಅವರ ಪುತ್ಥಳಿಗೆ ಪೂಜೆ ನೆರವೇರಿಸಲಾಯಿತು   

ಹುಕ್ಕೇರಿ: ‘ಸಹಕಾರ ತತ್ವದಡಿ ತಾಲ್ಲೂಕಿನ ಜನರಿಗೆ ವಿದ್ಯುತ್ ಸರಬರಾಜು ಮಾಡುವ ಸಂಘ ಸೇರಿದಂತೆ ರೈತಪರ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಿದ ಶ್ರೇಯಸ್ಸು ದಿ.ಅಪ್ಪಣಗೌಡ ಪಾಟೀಲ ಅವರಿಗೆ ಸಲ್ಲುತ್ತದೆ’ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ಸ್ಥಳೀಯ ವಿದ್ಯುತ್ ಸಹಕಾರ ಸಂಘದ ಆವರಣದಲ್ಲಿ ದಿ.ಅಪ್ಪಣ್ಣಗೌಡರ 51ನೇ ಪುಣ್ಯಸ್ಮರಣೆ ನಿಮಿತ್ಯ ಅವರ ಪುತ್ಥಳಿಗೆ ಗುರುವಾರ ಪೂಜೆ ಸಲ್ಲಿಸಿ ಮಾತನಾಡಿ, ‘ಅಪ್ಪಣಗೌಡರು ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರಕ್ಕೆ ಭದ್ರಬುನಾದಿ ಹಾಕಿದ್ದಾರೆ’ ಎಂದರು.

‘ದೇಶದಲ್ಲಿ ಇಂತಹ 5 ಸಂಘಗಳನ್ನು ಅರವತ್ತರ ದೇಶಕದಲ್ಲಿ ಸ್ಥಾಪಿಸಲಾಯಿತು. ಆದರೆ ಅವು ಮುಚ್ಚಿಹೋಗಿ ಇದೊಂದು ಸಂಘ ಉಳಿದಿದೆ. ಇದಕ್ಕೆ ದಿ.ಅಪ್ಪಣ್ಣಗೌಡರ ನಿಸ್ವಾರ್ಥ ಮತ್ತು ಸಮಾಜಮುಖಿ ಕೆಲಸ ಕಾರಣ’ ಎಂದರು.

ADVERTISEMENT

ಸಂಘದ ಉಪಾಧ್ಯಕ್ಷ ಅಜಿತ ಮುನ್ನೋಳಿ ಮತ್ತು ನಿರ್ದೇಶಕ ಕಲಗೌಡ ಪಾಟೀಲ ಹಾಗು ಸತ್ಯಪ್ಪ ನಾಯಿಕ ಮಾತನಾಡಿ, ಈ ಸಂಘದಿಂದ ಗ್ರಾಹಕರಿಗೆ ಗುಣಮಟ್ಟದ ಹಾಗೂ ತ್ವರಿತ ಸೇವೆ ಸಲ್ಲಿಸಲು ಅನುಕೂಲವಾಗಿದೆ. ಸಂಘ ಉಳಿಸಿ ಬೆಳೆಸಲು ಗ್ರಾಹಕರು ಬಾಕಿ ಬಿಲ್ ತುಂಬುವಂತೆ ವಿನಂತಿಸಿದರು.

ನಿರ್ದೇಶಕರಾದ ಕೆಂಪಣ್ಣ ವಾಸೇದಾರ, ಶಿವನಗೌಡ ಮದವಾಲ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಖಂಡರಾದ ಗೌಸ್ಆಜಂ ನಾಯಿಕವಾಡಿ, ಗುರುಸಿದ್ದ ಮೂಡಲಗಿ, ವ್ಯವಸ್ಥಾಪಕ ದುರದುಂಡಿ ನಾಯಿಕ, ಅಕೌಂಟ್ ಆಫೀಸರ ಎಸ್.ಎನ್.ಹಿರೇಮಠ, ಎಂಜನಿಯರುಗಳಾದ ಎನ್.ಜೆ.ಖೆಮಲಾಪುರೆ, ಎನ್.ಎಸ್.ಸರದೇಸಾಯಿ. ಉದಯ ಮಗದುಮ್ಮ, ಬಿ.ಎಂ.ಮಗದುಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.