ಬೆಳಗಾವಿ: ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಮಂಗಳವಾರ ಮಹಿಳೆಯೊಬ್ಬರ ಪತಿಯ ಅನೈತಿಕ ಸಂಬಂಧ ಶಂಕಿಸಿ, ಕುದಿಯುವ ಎಣ್ಣೆಯನ್ನು ಅವರ ಮೇಲೆ ಎರಚಿದ್ದಾರೆ.
ವೈಶಾಲಿ ಪಾಟೀಲ ಆರೋಪಿ. ಪತಿ ಸುಭಾಷ ಪಾಟೀಲ (56) ಅವರ ಇನ್ನೊಬ್ಬ ಮಹಿಳೆಯ ಜತೆಗೆ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಿಂದ ಸುಡುವ ಎಣ್ಣೆ ತಲೆ ಮೇಲೆ ಸುರಿದಿದ್ದಾರೆ. ಇದು ಕೊಲೆ ಮಾಡುವ ಯತ್ನ ಎಂದು ಸುಭಾಷ ಮಾಧ್ಯಮಗಳ ಮುಂದೆ ದೂರಿದ್ದಾರೆ. ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
ಪಿಡಿಒ ಮೇಲೆ ಹಲ್ಲೆ: ಯರಗಟ್ಟಿ ತಾಲ್ಲೂಕಿನ ಮಾಡಮಗೇರಿ ಪಿಡಿಒ ಜಯಗೌಡ ಪಾಟೀಲ ಅವರ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಪರಮೇಶ ಚತ್ರಕೋಟಿ, ಹನುಮಂತ ಸಿದ್ದಣ್ಣವರ, ಸಿದ್ದಪ್ಪ ಚಿಕ್ಕಣ್ಣವರ, ಯಲ್ಲಪ್ಪ ಕೆಮ್ಮನಕೋಲ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಸುಭಾಷ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ನಾಲ್ವರೂ ಆಸ್ತಿ ಪರಭಾರೆ ಮಾಡಲು ಒತ್ತಾಯಿಸಿದರು. ಮಾಡದಿದ್ದಾಗ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.