ADVERTISEMENT

ಸಾವಳಗಿ: ಮೊಸಳೆಗಳಿಂದ ಆತಂಕ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 12:32 IST
Last Updated 4 ಜುಲೈ 2021, 12:32 IST
ಸಾವಳಗಿ ಗ್ರಾಮದಲ್ಲಿ ಸಿಕ್ಕ ಮೊಸಳೆ ಮರಿಯನ್ನು ನಿವಾಸಿ ‍‍ಪ್ರದರ್ಶಿಸಿದರು
ಸಾವಳಗಿ ಗ್ರಾಮದಲ್ಲಿ ಸಿಕ್ಕ ಮೊಸಳೆ ಮರಿಯನ್ನು ನಿವಾಸಿ ‍‍ಪ್ರದರ್ಶಿಸಿದರು   

ಸಾವಳಗಿ (ಗೋಕಾಕ ತಾ.:) ಗ್ರಾಮದಲ್ಲಿ ಮೊಸಳೆ ಮರಿಗಳು ಕಾಣಿಸಿಕೊಳ್ಳುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಚನ್ನಪ್ಪ ಮಗದುಮ್ಮ ಅವರ ಮನೆ ಹತ್ತಿರವೇ ಮೊಸಳೆ ಮರಿಯೊಂದು ಬಂದಿರುವುದು ಭಾನುವಾರ ವರದಿಯಾಗಿದೆ.

‘ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಆತಂಕ ನಿವಾರಣೆ ಮಾಡಬೇಕು’ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ADVERTISEMENT

‘ನದಿ ದಂಡೆಯಲ್ಲಿ ಹಾಗೂ ಹೊಲದಲ್ಲಿ ಓಡಾಡುವಾಗ ಜನರು ಎಚ್ಚರಿಕೆ ವಹಿಸಬೇಕು. ಮೊಸಳೆ ಕಂಡುಬಂದಲ್ಲಿ ಪಂಚಾಯ್ತಿಗೆ ತಿಳಿಸಬೇಕು’ ಎಂದು ಗ್ರಾ.ಪಂ. ಸದಸ್ಯ ದರಪ್ಪ ಮಗದುಮ್ಮ ಕೋರಿದರು.

ಪ್ರಮುಖರಾದ ಶಿವಾನಂದ ಮಗದುಮ್ಮ, ಚನ್ನಪ್ಪ ಮಗದುಮ್ಮ, ಬಸವರಾಜ ತಂಬೂರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.