ADVERTISEMENT

ಬೆಳಗಾವಿ: ಲಕ್ಷ್ಮಿಪೂಜೆಯೊಂದಿಗೆ ದೀಪಾವಳಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 13:42 IST
Last Updated 14 ನವೆಂಬರ್ 2020, 13:42 IST
ಬೆಳಗಾವಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಪೂಜೆಗಾಗಿ ಸಾರ್ವಜನಿಕರು ಶನಿವಾರ ಕಬ್ಬು ಖರೀದಿಸಿದರು
ಬೆಳಗಾವಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಪೂಜೆಗಾಗಿ ಸಾರ್ವಜನಿಕರು ಶನಿವಾರ ಕಬ್ಬು ಖರೀದಿಸಿದರು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ದೀಪಾವಳಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸಿದರು.

ನಗರದಾದ್ಯಂತ ಮನೆಗಳಲ್ಲಿ ಆಕಾಶ ಬುಟ್ಟಿಗಳನ್ನು ಕಟ್ಟಿದ್ದುದು, ವಿದ್ಯುತ್‌ ದೀಪಾಲಂಕಾರ ಮಾಡಿದ್ದು ಮತ್ತು ಹಣತೆಗಳನ್ನು ಸಾಲು ಸಾಲಾಗಿ ಬೆಳಗಿದ್ದುದು ಆಕರ್ಷಿಸಿತು. ಬಹುತೇಕ ಮನೆಗಳ ಎದುರು ಮಕ್ಕಳು, ಯುವತಿಯರು ಮತ್ತು ಮಹಿಳೆಯರು ಹಲವು ಬಣ್ಣಗಳಿಂದ ವೈವಿಧ್ಯಮಯ ರಂಗೋಲಿ ಬಿಡಿಸಿದ್ದು ಗಮನಸೆಳೆಯಿತು. ಈ ಆಚರಣೆ ಸೋಮವಾರದವರೆಗೂ ನಡೆಯಲಿದೆ.

ಮಳಿಗೆಗಳು, ಅಂಗಡಿಗಳು, ಕಚೇರಿಗಳು, ಹೋಟೆಲ್‌ಗಳು, ಕೆಲಸದ ಸ್ಥಳಗಳಲ್ಲಿ ಮಾಲೀಕರು ಲಕ್ಷ್ಮಿಪೂಜೆ ನೆರವೇರಿಸಿ ಒಳಿತಿಗಾಗಿ ಪ್ರಾರ್ಥಿಸಿದರು. ವಿವಿಧ ರೀತಿಯ ಸಿಹಿ ಪದಾರ್ಥಗಳು, ಚಕ್ಕುಲಿ, ಶಂಕರಪಾಳಿ, ಅವಲಕ್ಕಿ ಚೂಡಾ ಮೊದಲಾದವುಗಳನ್ನು ಬಂಧು–ಮಿತ್ರರಿಗೆ ನೀಡಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.