ಸವದತ್ತಿ: ‘ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಒಂದು ಕುಟುಂಬದ ವ್ಯಕ್ತಿಗಳು ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಮುಂದೆ ಮಂಗಳವಾರ ಹಲವರು ಪ್ರತಿಭಟನೆ ನಡೆಸಿದರು.
ಮುಸ್ಲಿಂ ಸಮಾಜದ ಪ್ರಮುಖ ಹಾಫೀಸಾಬ ಮುಲ್ಲಾ ಮಾತನಾಡಿ, ‘ಐದಾರು ಜನರು ಗ್ರಾಮದಲ್ಲಿ ಗೂಂಡಾಗಿರಿ ನಡೆಸುತ್ತಿದ್ದಾರೆ. ಸತ್ತಿಗೇರಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಫ್ತಾ ವಸೂಲಿ ಹಾಗೂ ಮಹಿಳೆಯರು– ಮಕ್ಕಳ ದಬ್ಬಾಳಿಕೆ ನಡೆಸಿದ್ದಾರೆ. ಇವರ ಮೇಲೆ ಈಗಾಗಲೇ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಅದಾಗ್ಯೂ ಇವರ ಅಟ್ಟಹಾಸ ತಪ್ಪಿಲ್ಲ. ಇವರ ಗೂಂಡಾ ಪ್ರವೃತ್ತಿಯಿಂದ ಮುಸ್ಲಿಂ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ’ ಎಂದು ಆರೋಪಿಸಿದರು.
‘ಇವರ ಕಾಟ ತಾಳದೇ ಕೆಲವರು ಗ್ರಾಮವನ್ನೇ ತೊರೆದಿವೆ. ಒಬ್ಬ ಮಹಿಳೆಯನ್ನು ಅಪಹರಿಸಿ ಮೂರು ವರ್ಷಗಳಿಂದ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ. ಅವರ ಅಪ್ರಾಪ್ತ ವಯಸ್ಸಿನ ಪುತ್ರಿಗೂ ಕಿರುಕುಳ ನೀಡಲಾರಂಭಿಸಿದ್ದಾರೆ’ ಎಂದು ದೂರಿದರು.
‘ಆರೋಪಿಗಳನ್ನು ಗಡೀಪಾರು ಮಾಡಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು’ ಎಂದು ಶಿರಸ್ತೇದಾರ ಗೀತಾ ದೊಡವಾಡ ಅವರಿಗೆ ಮನವಿ ಸಲ್ಲಿಸಿದರು.
ಕೆ.ಕೆ. ಪುಣೇದ, ಲುಕ್ಸಾನ್ ದನದಮನಿ, ಆಸೀಫ್ ಬಾಗೋಜಿಕೊಪ್ಪ, ಇರ್ಫಾನ್ ಸೊಗಲದ, ಸಫೀವುಲ್ಲಾ ಫೀರ್ಜಾದೆ, ಅಮೀರ ಗೋರಿನಾಯ್ಕ, ಮಕ್ತುಮ ಬಂಡೋಳ್ಳಿ, ಕಲಮು ಚೂರಿಖಾನ, ಇಸಾಕ್ ವಟ್ನಾಳ, ಸಲೀಮ ಜಮಾದಾರ, ಉಮೇಶ ಗೌಡರ, ಬುಡನಸಾಬ ನದಾಫ್, ದಾದಾಸಾಬ ನದಾಫ್, ಆಸೀಫ್ ಭಾಗವಾನ, ಖಾದೀರಸಾಬ ಭಾಗವಾನ, ಮಾಗಶಿರ್ ಭಾಗವಾನ, ಬುಡನಸಾಬ ಮಕಾಂದಾರ, ದಾವಲಸಾಬ ಚೂರಿಖಾನ, ಎಸ್.ಎಂ. ಫೆಂಡಾರಿ, ಸಮೀರ ಜಮಾದಾರ, ನಜೀರ ನದಾಫ್, ಎಸ್.ಎಂ. ಸಂಗ್ರೇಶಕೊಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.