ADVERTISEMENT

ಯಮಕನಮರಡಿ: 65 ಮಂದಿಗೆ ಉಜ್ವಲಾ ಅಡುಗೆ ಅನಿಲ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 16:28 IST
Last Updated 28 ನವೆಂಬರ್ 2023, 16:28 IST
ಯಮಕನಮರಡಿ ಸಮೀಪದ ಚಿಕ್ಕಾಲಗುಡ್ಡ ಗ್ರಾಮದಲ್ಲಿ ಫಲಾನುಭವಿಗಳಿಗೆ ಮಂಗಳವಾರ ಉಜ್ವಲ ಗ್ಯಾಸ್ ಅಡುಗೆ ಅನಿಲವನ್ನು  ಸಂಸದ ಅಣ್ಣಾಸಾಹೇಬ ಜೊಲ್ಲೆ ವಿತರಿಸಿದರು
ಯಮಕನಮರಡಿ ಸಮೀಪದ ಚಿಕ್ಕಾಲಗುಡ್ಡ ಗ್ರಾಮದಲ್ಲಿ ಫಲಾನುಭವಿಗಳಿಗೆ ಮಂಗಳವಾರ ಉಜ್ವಲ ಗ್ಯಾಸ್ ಅಡುಗೆ ಅನಿಲವನ್ನು  ಸಂಸದ ಅಣ್ಣಾಸಾಹೇಬ ಜೊಲ್ಲೆ ವಿತರಿಸಿದರು   

ಯಮಕನಮರಡಿ: ಸಮೀಪದ ಚಿಕ್ಕಾಲಗುಡ್ಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ 65 ಫಲಾನುಭವಿಗಳಿಗೆ ಉಚಿತ ಉಜ್ವಲಾ ಅಡುಗೆ ಅನಿಲ ವಿತರಣೆಯನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ಪ್ರತಿ ಮಹಿಳೆಯ ಆರೋಗ್ಯ ಚೆನ್ನಾಗಿರಲು ಮತ್ತು ಪರಿಸರ ನಾಶವಾಗಬಾರದು ಎಂಬ ದಿಶೆಯಲ್ಲಿ ದೇಶದ ಪ್ರಧಾನ ಮಂತ್ರಿಗಳ ಕನಸು ಇಂದು ನನಸಾಗಿದೆ’ ಎಂದು ಹೇಳಿದರು.

‘ಈ ಸಂದರ್ಭದಲ್ಲಿ ಯಮಕನಮರಡಿ ಯುವ ಮುಖಂಡ ರವಿ ಹಂಜಿ, ಶ್ರೀಶೈಲ ಯಮಕನಮರಡಿ, ಸಿದ್ದಲಿಂಗ ಸಿದ್ದಗೌಡರ, ಚೇತನ ಪಾಟೀಲ, ಚಿಕ್ಕಾಲಗುಡ್ಡ ಪಿಕೆಪಿಎಸ್ ಅಧ್ಯಕ್ಷ ಕಲ್ಲಪ್ಪಾ ಮರಡಿ, ಹಣಮಂತ ಇಮಾದಾರ, ಪ್ರಹ್ಲಾದ ನಾಯಿಕ, ಸಂಕೇಶ್ವರ ಸ್ವಸ್ತಿಕ್ ಗ್ಯಾಸ್ ವಿತರಕರಾದ ಮುಸಕಾರ ತಾರಳೆ, ಅಡಿವೆಪ್ಪಾ ಢಂಗ, ಅಶೋಕ ಕುರಣಿ, ವಿಶ್ವನಾಥ ಜರಳಿ, ಚಿದಾನಂದ ಏಶ್ಯಾಗೋಳ ಹಾಗೂ ಚಿಕ್ಕಾಲಗುಡ್ಡ, ಕುರಣಿ, ಉಳ್ಳಾಗಡ್ಡಿ-ಖಾನಾಪೂರ, ಹೆಬ್ಬಾಳದ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.