ಬೀದಿನಾಯಿ
ಬೆಳಗಾವಿ: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ಇಲ್ಲಿನ ಮಾರುತಿ ನಗರದಲ್ಲಿ ಎರಡು ವರ್ಷ ಮಗುವಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡ ಆರಾಧ್ಯ ತರಗಾರ(2) ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಳೆ.
‘ಮಹಾನಗರ ಪಾಲಿಕೆ ಮತ್ತು ಸದಸ್ಯ ಅಜೀಮ್ ಪಟವೇಗಾರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಆರಾಧ್ಯಳ ಹೆತ್ತವರು ಅಂಗವಿಕಲರಿದ್ದು, ಬಡ ಕುಟುಂಬವಿದೆ. ಚಿಕಿತ್ಸೆಗೆ ತಗುಲುವ ವೆಚ್ಚವನ್ನೆಲ್ಲ ಪಾಲಿಕೆ ವತಿಯಿಂದಲೇ ಭರಿಸಬೇಕು’ ಎಂದು ಆರಾಧ್ಯಾಳ ಸಂಬಂಧಿ ಸತೀಶ ತರಗಾರ ಒತ್ತಾಯಿಸಿದ್ದಾರೆ.
‘ಮಾರುತಿ ನಗರದಲ್ಲಿ ನಮ್ಮ ಕುಟುಂಬದ ಎರಡು ಮನೆಗಳಿವೆ. ಒಂದು ಮನೆಯಿಂದ ಮತ್ತೊಂದು ಮನೆಗೆ ಬಾಲಕಿ ಬರುವಾಗ ಬೀದಿನಾಯಿ ಕಚ್ಚಿ ಗಾಯಗೊಳಿಸಿದೆ’ ಎಂದು ಹೇಳಿದ್ದಾರೆ.
ಪ್ರತಿಕ್ರಿಯೆಗಾಗಿ ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದರೂ ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.