ADVERTISEMENT

ವದಂತಿಗೆ ಕಿವಿಗೊಡದಿರಿ, ಸ್ಪರ್ಧೆ ಖಚಿತ: ಪಕ್ಷೇತರ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 8:11 IST
Last Updated 23 ಏಪ್ರಿಲ್ 2023, 8:11 IST
ಡಾ.ವಿಶ್ವನಾಥ ಪಾಟೀಲ
ಡಾ.ವಿಶ್ವನಾಥ ಪಾಟೀಲ   

ಬೈಲಹೊಂಗಲ: ‘ಕ್ಷೇತ್ರದ ಜನರ ಮತ್ತು ಅಭಿಮಾನಿಗಳ ಆಶಯದಂತೆ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ. ಯಾರೂ ಊಹಾ ಪೋಹಗಳಿಗೆ, ವದಂತಿಗಳಿಗೆ ಕಿವಿಗೊಡಬೇಡಿ’ ಎಂದು ಪಕ್ಷೇತರ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಕ್ಷೇತ್ರದ ಜನರು, ಅಭಿಮಾನಿಗಳೇ ಹೈಕಮಾಂಡ್. ಅವರ ಭಾವನೆಗಳ ಜತೆ ಇರಲು ಪ್ರಯತ್ನಿಸುತ್ತೇನೆ’ ಎಂದರು.

‘ಅಧಿಕಾರ ಇಬ್ಬರು ವ್ಯಕ್ತಿಗಳ ನಡುವೆ ಓಡಾಡುವುದರ ಬಗ್ಗೆ ಜನರಿಗೆ ಅಕ್ರೋಶವಿದೆ. ಕ್ಷೇತ್ರದಲ್ಲಿ ರೈತ ಕುಟುಂಬಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮೋಸದ ರಾಜಕಾರಣ ವಿರುದ್ಧ ನಾನು ವೇದಿಕೆ ಆಗಲಿದ್ದೇನೆ ಅಷ್ಟೇ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.