ADVERTISEMENT

ಜಾಗೃತಾವಸ್ಥೆಯಲ್ಲಿ ಕನಸು ಕಾಣುವವ ಎಂಜಿನಿಯರ್‌: ಡಾ.ವೀಣಾ ದೇಸಾಯಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 11:01 IST
Last Updated 17 ಸೆಪ್ಟೆಂಬರ್ 2019, 11:01 IST
ಬೆಳಗಾವಿಯ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್‌ನಲ್ಲಿ ಈಚೆಗೆ ನಡೆದ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಎಂಜಿನಿಯರ್ ಡಾ.ವೀಣಾ ದೇಸಾಯಿ ಮಾತನಾಡಿದರು
ಬೆಳಗಾವಿಯ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್‌ನಲ್ಲಿ ಈಚೆಗೆ ನಡೆದ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಎಂಜಿನಿಯರ್ ಡಾ.ವೀಣಾ ದೇಸಾಯಿ ಮಾತನಾಡಿದರು   

ಬೆಳಗಾವಿ: ‘ಜಾಗೃತಾವಸ್ಥೆಯಲ್ಲಿ ಕನಸು ಕಾಣುವವನೇ ನಿಜವಾದ ಎಂಜಿನಿಯರ್‌’ ಎಂದು ಎಂಜಿನಿಯರ್ ಡಾ.ವೀಣಾ ದೇಸಾಯಿ ಹೇಳಿದರು.

ಇಲ್ಲಿನ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್‌ನಲ್ಲಿ ಈಚೆಗೆ ನಡೆದ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಶ್ರಮ ವಹಿಸಬೇಕು. ಸರಿಯಾಗಿ ಅಭ್ಯಾಸ ಮಾಡಿಲ್ಲದಿದ್ದರೆ, ಪರೀಕ್ಷೆಯ ಪೂರ್ವದಲ್ಲಿ ನಿದ್ರೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂದಿನ ದಿನಗಳಲ್ಲಿ ಸಾಮಾನ್ಯರೂ ಎಂತಹ ಫೋನ್ ಖರೀದಿಸಬೇಕು, ಅದರ ಸ್ಮರಣಸಾಮರ್ಥ್ಯ ಎಷ್ಟಿರಬೇಕು, ಎಷ್ಟು ಸ್ಮಾರ್ಟ್‌ ಆಗಿರಬೇಕು ಎಂದೆಲ್ಲಾ ತಿಳಿದಿರುತ್ತಾರೆ. ಸ್ಮಾರ್ಟ್‌ಫೋನ್ ಹೊಂದುವುದಕ್ಕಿಂತ ಮಿಗಿಲಾಗಿ ಸ್ಮಾರ್ಟ್ ಆಗುವುದು ಉತ್ತಮ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಎಸ್. ದೊಡ್ಡಣ್ಣವರ ಮಾತನಾಡಿದರು. ನೂತನವಾಗಿ ಚುನಾಯಿತರಾದ ವಿದ್ಯಾರ್ಥಿ ಸಂಘದ ವಿವಿಧ ಅಂಗಗಳ ಕಾರ್ಯದರ್ಶಿಗಳ ಹೆಸರನ್ನು ಪ್ರಕಟಿಸಲಾಯಿತು ಮತ್ತು ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಎನ್‌ಪಿಟಿಇಎಲ್‌ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಆರ್.ಜೆ. ಪಾಟೀಲ ಸ್ವಾಗತಿಸಿದರು. ಸ್ನೇಹಾ ಕಾಡಾಪುರೆ ಹಾಗೂ ಮೃಣಾಲಿನಿ ಪಾಟೀಲ ನಿರೂಪಿಸಿದರು. ಸಾಕ್ಷಿ ಪರಾಂಜಪೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.