ADVERTISEMENT

ಚನ್ನಮ್ಮನ ಕಿತ್ತೂರು: ವೈಭವದ ಚಿಕ್ಕನಂದಿಹಳ್ಳಿ ಬಸವೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 5:46 IST
Last Updated 14 ಮಾರ್ಚ್ 2024, 5:46 IST
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಚಿಕ್ಕನಂದಿಹಳ್ಳಿ ಬಸವೇಶ್ವರ ರಥೋತ್ಸವವು ಭಕ್ತಸಾಗರದ ನಡುವೆ ಸೋಮವಾರ ಅದ್ಧೂರಿಯಾಗಿ ನೆರವೇರಿತು
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಚಿಕ್ಕನಂದಿಹಳ್ಳಿ ಬಸವೇಶ್ವರ ರಥೋತ್ಸವವು ಭಕ್ತಸಾಗರದ ನಡುವೆ ಸೋಮವಾರ ಅದ್ಧೂರಿಯಾಗಿ ನೆರವೇರಿತು   

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಚಿಕ್ಕನಂದಿಹಳ್ಳಿಯ ಬಸವೇಶ್ವರ ರಥೋತ್ಸವ ಸೋಮವಾರ ವೈಭವದಿಂದ ನಡೆಯಿತು.

ದೇವಸ್ಥಾನದಿಂದ ಬಸವಣ್ಣನ ಪಾದಗಟ್ಟಿವರೆಗೆ ತೇರನೆಳೆದು ನೆರೆದಿದ್ದ ಭಕ್ತರು ಸಂಭ್ರಮಿಸಿದರು. ಪುನಃ ದೇವಸ್ಥಾನಕ್ಕೆ ಬಂದ ನಂತರ ರಥೋತ್ಸವ ಮುಕ್ತಾಯಗೊಂಡಿತು.

ಚನ್ನಬಸವ ಮತ್ತು ಬಸವಣ್ಣನ ಬೆಳ್ಳಿಮೂರ್ತಿ ರಥದಲ್ಲಿಟ್ಟು ಜಯಘೋಷದೊಂದಿಗೆ ತೇರನೆಳೆಯಲಾಯಿತು. ಮಂಗಳವಾರ ರಥದ ಕಳಸ ಅವರೋಹಣದೊಂದಿಗೆ ಆರು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು.

ADVERTISEMENT

ಮಾರ್ಚ್‌ 7ರಿಂದ 12ರವರೆಗೆ ನಿತ್ಯ ಬೆಳಿಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ, ಭಜನೆ, ಮಹಾಪ್ರಸಾದ ನೆರವೇರಿದವು.

ಟ್ರಸ್ಟ್ ಅಧ್ಯಕ್ಷ ಶಿವನಸಿಂಗ್ ಮೊಕಾಶಿ, ಕಾರ್ಯದರ್ಶಿ, ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಟ್ರಸ್ಟಿಗಳಾದ ಮಲ್ಲಯ್ಯ ಅಂಗಡಿ, ನಾಗನಗೌಡ ಪಾಟೀಲ, ಬಸವಣ್ಣೆಪ್ಪ ಉಳ್ಳೇಗಡ್ಡಿ, ಬಸವಂತಸಿಂಗ್ ಮೊಕಾಸಿ, ಚಂದ್ರಪ್ಪ ಮೊಕಾಶಿ, ಸಿದ್ದಪ್ಪ ಅಂಗಡಿ, ಸುಲೋಚನ ಕೋಲಕಾರ, ಪ್ರಸಾದ ಸಮಿತಿ ಸದಸ್ಯರು, ಯುವಕರು, ಚಿಕ್ಕನಂದಿಹಳ್ಳಿ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.