ADVERTISEMENT

ಮುಗಳಖೋಡ: ಮಾಳಿ ನಿಗಮ ಸ್ಥಾಪನೆಗೆ ಹೋರಾಟ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2023, 5:49 IST
Last Updated 30 ಆಗಸ್ಟ್ 2023, 5:49 IST
ಮುಗಳಖೋಡದಲ್ಲಿ ಈಚೆಗೆ ನಡೆದ ಸನ್ಮಾನ ಸಮಾರಂಭವನ್ನು ಸಿ.ಬಿ.ಕುಲಿಗೋಡ ಉದ್ಘಾಟಿಸಿದರು
ಮುಗಳಖೋಡದಲ್ಲಿ ಈಚೆಗೆ ನಡೆದ ಸನ್ಮಾನ ಸಮಾರಂಭವನ್ನು ಸಿ.ಬಿ.ಕುಲಿಗೋಡ ಉದ್ಘಾಟಿಸಿದರು   

ಮುಗಳಖೋಡ: ‘ಮಾಳಿ ಮಾಲಗಾರ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವವರೆಗೆ ನಾವು ಹೋರಾಟ ಮಾಡುತ್ತೇವೆ. ರಾಜಕೀಯ ಮರೆತು ಪಕ್ಷಾತೀತವಾಗಿ ಕೈ ಜೋಡಿಸುತ್ತೇವೆ’ ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಸಿ.ಬಿ.ಕುಲಿಗೋಡ ಹೇಳಿದರು.

ಪಟ್ಟಣದಲ್ಲಿ ಈಚೆಗೆ ನಡೆದ ಮಾಳಿ-ಮಾಲಗಾರ ಸಮಾಜದಲ್ಲಿ ಚುನಾಯಿತ ಪ್ರತಿನಿಧಿಗಳ ಸತ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಗಮಕ್ಕಾಗಿ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹಕ್ಕೂ ಸಿದ್ಧ ಎಂದರು.

ಸಾಹಿತಿ ವಿ.ಎಸ್.ಮಾಳಿ, ರಾಜ್ಯ ಘಟಕದ ಅಧ್ಯಕ್ಷ ಕಾಡು ಮಾಳಿ ಮಾತನಾಡಿದರು. ವಿವಿಧ ಗ್ರಾಮ ಪಂಚಾಯಿತಿಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ಸತ್ಕರಿಸಲಾಯಿತು. ಪ್ರೊ.ಪ್ರಕಾಶ ಕಂಬಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ADVERTISEMENT

ಅಪ್ಪಸಾಬ್‌ ಕುಲಿಗುಡೆ ಹಾಗೂ ಸಮಾಜದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.