ADVERTISEMENT

ಇಸ್ಪೀಟ್ ಜೂಜಾಟ: 14 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮೇ 2021, 16:23 IST
Last Updated 21 ಮೇ 2021, 16:23 IST
ಬೆಳಗಾವಿಯ ರಾಜೀವಗಾಂಧಿ ನಗರದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ ಆರೋಪದ ಮೇಲೆ 14 ಮಂದಿಯನ್ನು ಎಪಿಎಂಸಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ
ಬೆಳಗಾವಿಯ ರಾಜೀವಗಾಂಧಿ ನಗರದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ ಆರೋಪದ ಮೇಲೆ 14 ಮಂದಿಯನ್ನು ಎಪಿಎಂಸಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ   

ಬೆಳಗಾವಿ: ಇಲ್ಲಿನ ಬಾಕ್ಸೈಟ್ ರಸ್ತೆಯ ರಾಜೀವ್‌ಗಾಂಧಿ ನಗರ ಸಾರ್ವಜನಿಕ ಜಾಗದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 14 ಮಂದಿಯನ್ನು ಎಪಿಎಂಸಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸಮೀಪ ಪಠಾಣ, ನರಸಿಂಗ ರಜಪೂತ, ಬಾಳು ಬಿರಾಜೆ, ವಿಕ್ಕಿ ಕೇಸರಕರ, ಮತೀನ ಶೇಖನೂರ, ಅತೀಬ ಅತ್ತಾರ, ಮತೀಬ ಸವದತ್ತಿಕರ, ಸಾಕೀಬ ತಂಬಾಬೋಲೆ, ವಿಜಯ ದೇಮನ್ನಾಚೆ, ವಿನಾಯಕ ಬೆನ್ನಾಳಕರ, ಟಿಂಕು ದೊಡ್ಡಮನಿ, ದಿನೇಶ ಪಾಟೀಲ, ಸಿದ್ಧಾಂತ ಪಾಟೀಲ ಹಾಗೂ ವಾಸೀಮ ಖಾನಾಪುರೆ ಬಂಧಿತರು. ಅವರಿಂದ ₹ 1.57 ಲಕ್ಷ, 2 ಮೊಬೈಲ್ ಫೋನ್‌, ಮೂರು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್‌ಸ್ಪೆಕ್ಟರ್‌ ಜಾವೇದ ಮುಶಾಪುರಿ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಎ‍ಪಿಎಂಸಿ ಠಾಣೆಯಲ್ಲಿ ಐಪಿಸಿ ಹಾಗೂ ಕರ್ನಾಟಕ ಸಾಂಕ್ರಾಮಿಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT