ADVERTISEMENT

ಗಾಂಜಾ ಗಿಡ ವಶ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 13:52 IST
Last Updated 5 ಸೆಪ್ಟೆಂಬರ್ 2020, 13:52 IST
ನಾಗರಮುನ್ನೋಳಿ ಸಮೀಪದ ಬೆಳಗಲಿ ಗ್ರಾಮದ ಹೊರವಲಯದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ
ನಾಗರಮುನ್ನೋಳಿ ಸಮೀಪದ ಬೆಳಗಲಿ ಗ್ರಾಮದ ಹೊರವಲಯದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ   

ನಾಗರಮುನ್ನೋಳಿ: ಸಮೀಪದ ಬೆಳಗಲಿ ಗ್ರಾಮದ ಹೊರವಲಯದಲ್ಲಿ ಕಬ್ಬಿನ ಗದ್ದೆಯೊಳಗೆ ಬೆಳೆದಿದ್ದ ₹ 35ಸಾವಿರ ಮೌಲ್ಯದ 17.500 ಕೆ.ಜಿ.ಯಷ್ಟು ಗಾಂಜಾ ಗಿಡಗಳನ್ನು ಚಿಕ್ಕೋಡಿ ಪೊಲೀಸರು ಶನಿವಾರ ವಶಪಡಿಸಿಕೊಂಡು, ಒಬ್ಬರನ್ನು ಬಂಧಿಸಿದ್ದಾರೆ.

ರಾಯಬಾಗ ತಾಲ್ಲೂಕಿನ ಮುಗಳಖೋಡದ ಶಿವಪ್ಪ ಸ. ಶಿರಗಾವಿ ಬಂಧಿತ ಆರೋಪಿ.

ಖಚಿತ ಮಾಹಿತ ಮೇರೆಗೆ ಪಿಎಸ್‌ಐ ರಾಕೇಶ ಬಗಲಿ ನೇತೃತ್ವದಲ್ಲಿ ದಾಳಿ ನಡೆದಿದೆ. ಸಿಬ್ಬಂದಿ ಪಿ.ಬಿ. ಮಾರವಣಖೋಪ, ಬಿ.ಎಚ್. ಮಾಳಿ, ಆರ್.ಆರ್. ಕರಿಗಾರ, ಎಸ್.ಎಂ. ಚೌಗಲಾ, ಬಿ.ಎ. ಲಕ್ಕನ್ನವರ, ಅರ್.ಎಲ್. ಶಿಳನ್ನವರ, ಭೋಸಲೆ, ಕೆ.ವಿ. ಚಳಿಕೇರಿ, ದಿಲೀಪ ಬಸನಾಯ್ಕರ, ಆರ್.ಎಲ್. ಖೋತ, ವಿಠ್ಠಲ ಇಟ್ನಾಳೆ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.