ADVERTISEMENT

ಕೋವಿಡ್-19:ಜನ ಜಾಗೃತಿಗೆ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 14:16 IST
Last Updated 24 ಏಪ್ರಿಲ್ 2020, 14:16 IST
ಗೋಕಾಕದಲ್ಲಿ ಶುಕ್ರವಾರ ಕೋವಿಡ್-19 ಜಾಗೃತಿ ಮೂಡಿಸಲು ಪಥಸಂಚಲನದಲ್ಲಿ ಸೋಮವಾರ ಪೇಟೆಗೆ ಬಂದ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ನಗರಸಭೆ ಸದಸ್ಯೆ ಲಕ್ಷ್ಮಿ ದೇಶನೂರ ಆರತಿ ಬೆಳಗುವ ಮೂಲಕ ಸ್ವಾಗತ ಕೋರಿದರು
ಗೋಕಾಕದಲ್ಲಿ ಶುಕ್ರವಾರ ಕೋವಿಡ್-19 ಜಾಗೃತಿ ಮೂಡಿಸಲು ಪಥಸಂಚಲನದಲ್ಲಿ ಸೋಮವಾರ ಪೇಟೆಗೆ ಬಂದ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ನಗರಸಭೆ ಸದಸ್ಯೆ ಲಕ್ಷ್ಮಿ ದೇಶನೂರ ಆರತಿ ಬೆಳಗುವ ಮೂಲಕ ಸ್ವಾಗತ ಕೋರಿದರು   

ಗೋಕಾಕ: ಆರೋಗ್ಯ ಮತ್ತು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಶುಕ್ರವಾರ ಇಲ್ಲಿನ ವಿವಿಧೆಡೆ ಪಥಸಂಚಲನ ನಡೆಸಿ, ಕೊರೊನಾ ವೈರಾಣು ಸೋಂಕು ಕುರಿತು ಜಾಗೃತಿ ಮೂಡಿಸಿದರು.

ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಅವರ ಮೇಲೆ ಸಾರ್ವಜನಿಕರು ಪುಷ್ಪಗಳ ದಳಗಳ ಮಳೆಗರೆದರು. ಸೋಮವಾರ ಪೇಟೆಯಲ್ಲಿ ನಗರಸಭೆ ಸದಸ್ಯೆ ಲಕ್ಷ್ಮಿ ದೇಶನೂರ ಮೊದಲಾದ ಸುಮಂಗಲೆಯರು ಆರತಿ ಬೆಳಗಿ ಸ್ವಾಗತ ಕೋರಿದರು.

ಡಿವೈಎಸ್ಪಿ ಪ್ರಭು ಡಿ.ಟಿ., ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ, ಸಿಪಿಐ ಗೋಪಾಲ ರಾಥೋಡ, ಗೋಕಾಕ ಶಹರ ಠಾಣೆ ಎಸ್.ಐ. ಎ.ಟಿ. ಅಮ್ಮಿನಭಾಂವಿ, ಗ್ರಾಮೀಣ ಠಾಣೆ ಎಸ್.ಐ. ನಾಗರಾಜ ಖಿಲಾರೆ, ರೋಟರಿ ಕ್ಲಬ್ ಅಧ್ಯಕ್ಷ ಸೋಮಶೇಖರ ಮಗದುಮ್ಮ, ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ, ವರ್ತಕ ಮಲ್ಲಿಕಾರ್ಜುನ ಚುನಮರಿ, ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿ, ಆರೋಗ್ಯ ಇಲಾಖೆ, ಅಂಗನವಾಡಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.