
ರಮೇಶ ಲಕ್ಕಪ್ಪ ಕೇಸರಗೊಪ್ಪ ಉರ್ಫ್ ಚವ್ಹಾಣ
ಗೋಕಾಕ: ಸ್ವಾಧೀನ ಅವಧಿ ಕೊನೆಗೊಂಡಿದ್ದರೂ ರಿವಾಲ್ವರ್ ಇಟ್ಟುಕೊಂಡಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ– ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ರಮೇಶ ಲಕ್ಕಪ್ಪ ಕೇಸರಗೊಪ್ಪ ಉರ್ಫ್ ಚವ್ಹಾಣ ಅವರನ್ನು ಶಸ್ತ್ರಾಸ್ತ್ರ ಕಾನೂನು ಉಲ್ಲಂಘನೆ ಆರೋಪದ ಮೇಲೆ ಇಲ್ಲಿನ ಕೋರ್ಟ್ ಸರ್ಕಲ್ ಬಳಿ ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ಭ್ರಷ್ಟಾಚಾರ ನಿರ್ಮೂಲನಾ ದಳದ ಉಪಾಧ್ಯಕ್ಷರೂ ಹೇಳಿಕೊಂಡು ಆರೋಪಿ ಓಡಾಡುತ್ತಿದ್ದರು. ಅವರಿಂದ ₹ 2.30 ಲಕ್ಷ ಮೌಲ್ಯದ ಎರಡು ಮೊಬೈಲ್ ಐ ಫೋನ್, ₹25ಲಕ್ಷ ಮೌಲ್ಯದ ಕಾರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತನಿಂದ ರಿವಾಲ್ವರ್ ವಶಕ್ಕೆ ಪಡೆದಿರುವ ಗೋಕಾಕ ಶಹರ ಪೊಲೀಸ್ ಠಾಣೆಯ ಸಬ್ ಇನಸ್ಪೆಕ್ಟರ್ ಕಿರಣ ಮೋಹಿತೆ ಅವರು ನೀಡಿದ ದೂರಿನನ್ವಯ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.