ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ನಿಪ್ಪಾಣಿಯಲ್ಲಿ ಹೆಚ್ಚು, ಕಾಗವಾಡದಲ್ಲಿ ಕಡಿಮೆ ಮತದಾನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 9:29 IST
Last Updated 28 ಡಿಸೆಂಬರ್ 2020, 9:29 IST

ಬೆಳಗಾವಿ: ಜಿಲ್ಲೆಯ 7 ತಾಲ್ಲೂಕುಗಳ 218 ಗ್ರಾಮ ಪಂಚಾಯಿತಿಗಳ 1,693 ಮತಗಟ್ಟೆಗಳಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 83.16ರಷ್ಟು ಮತದಾನವಾಗಿದೆ.

ಜಿಲ್ಲಾಡಳಿತ ಸೋಮವಾರ ನೀಡಿರುವ ಪರಿಷ್ಕೃತ ಮಾಹಿತಿ ಪ್ರಕಾರ, ನಿಪ್ಪಾಣಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ 84.77 ಮತ್ತು ಕಾಗವಾಡದಲ್ಲಿ ಅತಿ ಕಡಿಮೆ ಎಂದರೆ ಶೇ 80.94ರಷ್ಟು ಮತದಾನವಾಗಿದೆ. ಅಲ್ಲಿ ಗ್ರಾಮ ‍ಪಂಚಾಯಿತಿಗಳ ಸಂಖ್ಯೆ ಎಂಟಷ್ಟೇ ಇದೆ.

5,93,310 ಪುರುಷರು ಹಾಗೂ 5,65,755 ಮಹಿಳೆಯರು ಸೇರಿ ಒಟ್ಟು 11,59,065 ಮತದಾರರಿದ್ದರು. ಅವರಲ್ಲಿ 5,00,498 ಪುರುಷರು ಮತ್ತು 4,63,348 ಮಹಿಳೆಯರು ಸೇರಿ 9,63,846 ಮತದಾರರು ಹಕ್ಕು ಚಲಾಯಿಸಿದ್ದಾರೆ. ಎಲ್ಲ ತಾಲ್ಲೂಕುಗಳಲ್ಲೂ ಮತದಾನ ಪ್ರಮಾಣ ಶೇ 80ರಷ್ಟು ಆಗಿರುವುದು ವಿಶೇಷ.

ADVERTISEMENT

ಮತದಾನದ ವಿವರ

ತಾಲ್ಲೂಕು; ಗ್ರಾ.ಪಂ; ಮತ ಚಲಾಯಿಸಿದವರು; ಶೇಕಡ

ಸವದತ್ತಿ; 40; 1,58, 833; 82.79

ರಾಮದುರ್ಗ; 33; 1,28, 893; 82.55

ಚಿಕ್ಕೋಡಿ; 36; 1,74, 143; 84.49

ನಿಪ್ಪಾಣಿ; 27;1, 32, 704; 84.77

ಅಥಣಿ; 41; 1,79, 163; 82.64

ಕಾಗವಾಡ; 08; 50,332; 80.94

ರಾಯಬಾಗ; 33;1, 39,778; 82.49

ಒಟ್ಟು; 218; 9,63,846; 83.16

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.