ADVERTISEMENT

‘ಮಹಾತ್ಮರನ್ನು ಜಾತಿಗೆ ಸೇರಿಸಬೇಡಿ’

ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ, ಬೃಹತ್ ಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 16:09 IST
Last Updated 14 ಆಗಸ್ಟ್ 2022, 16:09 IST
‌‌ಅಥಣಿಯಲ್ಲಿ ಶನಿವಾರ ನಡೆದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಲಕ್ಷ್ಮಣ ಸವದಿ ಅವರು ಸಸಿಗೆ ನೀರು ಹಾಕಿ ಉದ್ಘಾಟಿಸಿದರು
‌‌ಅಥಣಿಯಲ್ಲಿ ಶನಿವಾರ ನಡೆದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಲಕ್ಷ್ಮಣ ಸವದಿ ಅವರು ಸಸಿಗೆ ನೀರು ಹಾಕಿ ಉದ್ಘಾಟಿಸಿದರು   

ಅಥಣಿ: ಮಾನವ ಕುಲಕ್ಕೆ ಮಾದರಿಯಾದ ಮಹಾಪುರುಷರ ಜಯಂತಿಗಳು ಯಾವುದೇ ಜಾತಿಗೆ ಸೀಮಿತವಲ್ಲ. ಸಮಾಜದ ಸುಧಾರಕರನ್ನು ಯಾರೂ ಜಾತಿಗೆ ಸೀಮಿತವಾಗಿ ನೋಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಗಚ್ಚಿನಮಠದ ಆವರಣದಲ್ಲಿ ಶನಿವಾರ ಜರುಗಿದ ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣ ಅವರ 888ನೇ ಜಯಂತ್ಯುತ್ಸವ ಹಾಗೂ ಬೃಹತ್ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹೆಸರಿಗೆ ಮಾತ್ರ ಬಸವಣ್ಣನವರ ವಚನ ಹೇಳಿ, ಜಾತಿ ವ್ಯವಸ್ಥೆ ಮುಂದುವರಿಸುವವರು ಇದ್ದಾರೆ. ಶರಣರ ಮಾತು ಪಾಲಿಸುವುದಾದರೆ ಇದು ಬದಲಾಗಬೇಕು ಎಂದರು.

ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಹಡಪದ ಅಪ್ಪಣ್ಣ ಅವರ ಚಿಂತಣೆಗಳನ್ನು ನೆನೆಯಲು ಇದು ಸೂಕ್ತ ಕಾಲ. ಸಮಾಜದ ಪ್ರತಿಯೊಬ್ಬರು ವಿದ್ಯೆ ಕಲಿತು ಸಂಸ್ಕಾರಯುತವಾಗಿ ಬದುಕಬೇಕಿದೆ ಎಂದರು.

ADVERTISEMENT

ಗಚ್ಚಿನಮಠದ ಶಿವಬಸವ ಗುರುಮುರುಘ ರಾಜೇಂದ್ರ ಸ್ವಾಮೀಜಿ, ಯಕ್ಕಂಚಿಯ ಗುರುಪಾದ ಸ್ವಾಮೀಜಿ, ರಬಕವಿಯ ಗುರುಸಿದ್ದೇಶ್ವರ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಮಾಜದ ರಾಜ್ಯ ಘಟಕದ ಉಪಾಧ್ಯಕ್ಷ ಸಂತೋಷ ಹಡಪದ ಪ್ರಾಸ್ತಾವಿಕ ಭಾಷಣ ಮಾಡಿದರು. ಭೀಮಾಶಂಕರ‌ ಶರಣರು ‘ಶರಣ ಚಿಂತನೆ’ ತಿಳಿಸಿದರು. ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಾನಂದ ಹುನ್ನೂರ, ಬಸವರಾಜ ಹಡಪದ, ಶಿವರುದ್ರ ಘೂಳಪ್ಪನವರ, ಅಮರ ದುರ್ಗನ್ನವರ, ಸುರೇಶ ಹಡಪದ, ಮಹಾತೇಶ ಹಡಪದ, ಚನ್ನು ನಾವಿ, ಮಾರುತಿ ನಾವಿ, ವಿಜಯ ನಾವಿ, ಪ್ರವೀಣ ಹಡಪದ, ರಾಜು ಹಡಪದ, ಆನಂದ ಹಡಪದ, ಸದಾಶಿವ ಹಡಪದ, ಅಮರಸಿಂಹ ಹಡಪದ, ಸುನೀಲ ಹಡಪದ, ಸಚಿನ್‌, ಧರೆಪ್ಪ ಹಡಪದ, ಸಿದ್ದು ಹಡಪದ, ಕುಮಾರ ನಾವಿ, ಬಸವರಾಜ ನಾವಿ, ಶಂಕರ ನಾವಿ, ಬಸು ನಾವಿ, ಪದ್ಮಣ್ಣ ಹಡಪದ, ಸಂಜು ನಾವಿ, ಮುತ್ತಪ್ಪ ನಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.