ಹಳ್ಳೂರ: ಗ್ರಾಮದಲ್ಲಿ ಗುರುವಾರ ಭಗವಾನ್ ಮಹಾವೀರರ 2,624ನೇ ಜಯಂತಿ ಶ್ರಾವಕ– ಶ್ರಾವಕಿಯರು ಸ್ತುತಿ ಸ್ತೋತ್ರ ಪೂಜೆಯೊಂದಿಗೆ ಆಚರಿಸಿದರು.
ಆದಿನಾಥ ಜೈನ ಬಸದಿಯಲ್ಲಿ ನಸುಕಿನ 5 ಗಂಟೆಗೆ ಮಂಗಲ ವಾದ್ಯ ಘೋಷ, ಧ್ವಜಾರೋಹಣ, ಜಲಾಭಿಷೇಕ, ಪಂಚಾಮೃತ ಅಭಿಷೇಕ, ನಾಮಕರಣ ಮಾಡಿದರು. ನಂತರ ಅನ್ನ ಪ್ರಸಾದ ಜರುಗಿತು.
ಸಂಜೆ 4 ಗಂಟೆಗೆ ಮಹಾವೀರರ ಪಲ್ಲಕ್ಕಿ ಉತ್ಸವ, ಶ್ರಾವಕಿಯರಿಂದ ಆರತಿ ಮೇಳ, ಮಂಗಲಕುಂಭ, ಕುಂಭಮೇಳ, ಹಾಗೂ ಮಂಗಳ ವಾದ್ಯದೊಂದಿಗೆ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಜರುಗಿತು. ಗ್ರಾಮದ ಮುಖಂಡರು, ಸಮಾಜ ಬಾಂಧವರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.