ADVERTISEMENT

ಹುಕ್ಕೇರಿ | ರಸ್ತೆ ಅತಿಕ್ರಮಣ ತೆರವಿಗೆ ಸಚಿವ ಸತೀಶ್ ಜಾರಕಿಹೊಳಿ ಸೂಚನೆ

ಜನರ ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:31 IST
Last Updated 20 ಜೂನ್ 2025, 15:31 IST
ಹುಕ್ಕೇರಿಯಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ ‘ಕುಂದು ಕೊರತೆ’ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜನರ ಅಹವಾಲು ಆಲಿಸಿದರು.
ಹುಕ್ಕೇರಿಯಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ ‘ಕುಂದು ಕೊರತೆ’ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜನರ ಅಹವಾಲು ಆಲಿಸಿದರು.   

ಹುಕ್ಕೇರಿ: ಹೊನ್ನಿಹಳ್ಳಿ ಭೈರಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಪಿಡಬ್ಲೂಡಿ ರಸ್ತೆ ಅತಿಕ್ರಮಣ ನಡೆಯುತ್ತಿರುವುದು ಕಂಡು ಬಂದಿದ್ದು, ಸರ್ವೆ ಮಾಡಿಸಿ ಸಮಸ್ಯೆ ಬಗೆಹರಿಸಿ ಎಂದು ಎಇಇ ಪ್ರವೀಣ ಮಾಡ್ಯಾಳ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ ‘ಕುಂದು ಕೊರತೆ’ ಸಭೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.

ಪಟ್ಟಣದ ಕಲ್ಲು ಗಣಿ, ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ತರಕಾರಿ ಮಾರುಕಟ್ಟೆ, ಸೋಯಾ ಅವರೆಗೆ ಸಂಕೇಶ್ವರ ಎಪಿಎಂಸಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಖರೀದಿ ನಿಲ್ಲಿಸಿರುವುದು, ಹೊಳೆಯಲ್ಲಿ ಮೊಸಳೆಯಿಂದ ಜನರಿಗೆ ಅಗುತ್ತಿರುವ ಸಮಸ್ಯೆ, ಹಕ್ಕುಪತ್ರ ವಿತರಣೆ, ಅಕ್ರಮ ಸಕ್ರಮ ಸಾಗುವಳಿ ಪತ್ರದ, ಅವರಗೋಳದಲ್ಲಿ ಬಗೆಹರಿಯದ ಸ್ಮಶಾನ ಭೂಮಿ ಸಮಸ್ಯೆ, ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ಕೊರತೆ, ಗಾಂಧಿನಗರ ಶಾಲೆಯ ಶೌಚಾಲಯ ನಿರ್ಮಾಣ ಸಮಸ್ಯೆ, ಕಾರ್ಮಿಕರಿಗೆ ಜಾಬ್ ಕಾರ್ಡ್ ಸಿಗದಿರುವ ಸಮಸ್ಯೆ ಸೇರಿದಂತೆ ಆಯಾ ಗ್ರಾಮಗಳ ವಿವಿಧ ಸಮಸ್ಯೆಗಳನ್ನು ಸಚಿವರ ಎದುರು ಜನರು ಹೇಳಿಕೊಂಡರು.

ADVERTISEMENT

ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಬಿಇಒ ಪ್ರಭಾವತಿ ಪಾಟೀಲ್ ಅವರಿಗೆ ಸಚಿವರು ಸೂಚಿಸಿದರು. ಕಲ್ಲು ಗಣಿ ಸಮಸ್ಯೆ ಬಗೆ ಹರಿಸಲು ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಅವರಿಗೆ, ಮೊಸಳೆ ಸಮಸ್ಯೆ ಬಗೆಹರಿಸಲು ಆರ್.ಎಫ್.ಒ ಬಿ.ಎಲ್. ಸನದಿ ಅವರಿಗೆ, ಕನಿಷ್ಠ ಬೆಂಬಲ ಬೆಲೆ ಖರೀದಿ ಸಮಸ್ಯೆ ಬಗೆಹರಿಸಲು ಎಡಿಎ ಆರ್.ಬಿ.ನಾಯ್ಕರ್ ಅವರಿಗೆ, ಹಕ್ಕುಪತ್ರ ವಿತರಣೆ ಮತ್ತು ಸಾಗುವಳಿ ಪತ್ರ ಸಮಸ್ಯೆ ಬಗೆಹರಿಸಲು ತಹಶೀಲ್ದಾರ್ ಮಂಜುಳಾ ನಾಯಕ ಅವರಿಗೆ, ಶೌಚಾಲಯ ಸಮಸ್ಯೆ ಬಗೆಹರಿಸಲು ಜಿಲ್ಲಾ ಪಂಚಾಯಿತಿ ಎಇಇ ಶಶಿಕಾಂತ ವಂದಾಳೆ ಅವರಿಗೆ, ಜಾಬ್ ಕಾರ್ಡ್ ಸಮಸ್ಯೆ ಬಗೆಹರಿಸಲು ಕಾರ್ಮಿಕ ಅಧಿಕಾರಿಗೆ ಸಚಿವರು ಸೂಚಿಸಿದರು.

ತಹಶೀಲ್ದಾರ್ ಮಂಜುಳಾ ನಾಯಕ ಮತ್ತು ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್.ಮಲ್ಲಾಡದ ಪೂರಕ ಮಾಹಿತಿ ನೀಡಿದರು.

ಪುರಸಭೆ ಅಧ್ಯಕ್ಷ ಇಮ್ರಾನ ಮೊಮೀನ್, ಮುಖಂಡರಾದ ಮಹಾಂತೇಶ ಮಗದುಮ್ಮ, ವೀರಣ್ಣ ಬಿಸಿರೊಟ್ಟಿ, ಕಿರಣಸಿಂಗ್ ರಜಪೂತ, ಗ್ಯಾರಂಟಿ ಯೋಜನೆ ತಾಲ್ಲೂಕು ಘಟಕದ ಅಧ್ಯಕ್ಷ ಶಾನೂಲ್ ತಹಸೀಲ್ದಾರ್, ಸದಸ್ಯರು, ಬಸವರಾಜ ಕೋಳಿ, ಮಲ್ಲಿಕಾರ್ಜುನ ರಾಶಿಂಗೆ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಸಿಪಿಐ ಮಹಾಂತೇಶ ಬಸ್ಸಾಪುರ, ಶಿವಶರಣ ಅವುಜಿ, ಟಿಎಚ್ಒ ಡಾ.ಉದಯ ಕುಡಚಿ, ಕಿರಣ ಅಂಬೇಕರ್ ಇದ್ದರು.

ಹುಕ್ಕೇರಿಯಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ ‘ಕುಂದು ಕೊರತೆ’ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜನರ ಅಹವಾಲು ಆಲಿಸಿದರು.
ಹುಕ್ಕೇರಿಯಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ ‘ಕುಂದು ಕೊರತೆ’ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕುರಣಿ ಗ್ರಾಮ ಪಂಚಾಯ್ತಿಗೆ ‘ಕ್ಷಯ ಮುಕ್ತ’ ಗ್ರಾಮ ಪಂಚಾಯ್ತಿ ಪ್ರಶಸ್ತಿ ಪತ್ರ ನೀಡಿದರು.
ಪ್ರಶಸ್ತಿ ವಿತರಣೆ
ಕ್ಷಯಮುಕ್ತ ಗ್ರಾಮ ಪಂಚಾಯಿತಿ ಎಂದು ಕೋಟ ಸಲಾಮವಾಡಿ ಕುರಣಿ ಬಸ್ಸಾಪುರ ಮತ್ತು ಪಾಶ್ಚಾಪುರ ಗ್ರಾಮ ಪಂಚಾಯಿತಿಗಳಿಗೆ ಸಚಿವ ಸತೀಶ ಜಾರಕಿಹೊಳಿ ಪ್ರಶಸ್ತಿ ಪತ್ರ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.