ADVERTISEMENT

ಹುಕ್ಕೇರಿ | ನಡುರಸ್ತೆಯಲ್ಲಿ ಯುವಕನ ಕೊಲೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 14:21 IST
Last Updated 11 ಆಗಸ್ಟ್ 2025, 14:21 IST
<div class="paragraphs"><p>ಕೊಲೆ (ಪ್ರಾತಿನಿಧಿಕ ಚಿತ್ರ)</p></div>

ಕೊಲೆ (ಪ್ರಾತಿನಿಧಿಕ ಚಿತ್ರ)

   

ಹುಕ್ಕೇರಿ (ಬೆಳಗಾವಿ ಜಿಲ್ಲೆ): ಪಟ್ಟಣದ ನಾಕಾ ಹತ್ತಿರ ಮಾರಕಾಸ್ತ್ರಗಳಿಂದ ಸೋಮವಾರ ಯುವಕನ ಕೊಲೆ ಮಾಡಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  

ತಾಲ್ಲೂಕಿನ ಅವರಗೋಳ ಗ್ರಾಮದ ಮೀರಾಸಾಬ್ (ಮಲೀಕಜಾನ್) ಹುಸೇನಸಾಬ್ ಜಮಖಂಡಿ (28) ಕೊಲೆಯಾದವರು. ಶ್ಯಾನೂಲ್ ಹುಸೇನಸಾಬ ಜಮಖಂಡಿ (24) ಮತ್ತು ಬಶೀರ ಸಿಕಂದರ್ ಕಿಲ್ಲೇದಾರ (38) ಬಂಧಿತ ಆರೋಪಿಗಳು.

ADVERTISEMENT

ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಸರ್ಕಲ್‌ದಿಂದ ಬಸ್ ನಿಲ್ದಾಣದ ಕಡೆ ಯುವಕನೂ ಬೈಕ್ ಮೇಲೆ ತೆರಳುತ್ತಿರುವಾಗ ಕೊಲೆ ಮಾಡಿದ್ದಾರೆ.

ಕೊಲೆಯಾದ ಯುವಕ ಸೋದರ ಸಂಬಂಧಿಕರ ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗಾರರು ರಸ್ತೆಯಲ್ಲಿ ಸಾಗುತ್ತಿದ್ದುದು ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಹುಕ್ಕೇರಿ ಪೊಲೀಸ್ ಇನ್‌ಸ್ಪೆಕ್ಟರ್ ಮಹಾಂತೇಶ ಬಸ್ಸಾಪುರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.