ADVERTISEMENT

ಟ್ರಂಪ್‌ ಮಾತು ಮೋದಿ ಕೇಳಿದ್ದು ತಪ್ಪು: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 0:07 IST
Last Updated 12 ಮೇ 2025, 0:07 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹುಕ್ಕೇರಿ (ಬೆಳಗಾವಿ ಜಿಲ್ಲೆ): ‘ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆ ನಿಲ್ಲಿಸಿದ ಕ್ರಮ ಸರಿಯಲ್ಲ. ಪ್ರಧಾನಿ ಮೋದಿಯವರು ಯುದ್ಧದ ವಿಚಾರದಲ್ಲಿ ಗಟ್ಟಿ ಮತ್ತು ಕಠಿಣ ನಿರ್ಧಾರ ಕೈಗೊಳ್ಳಬೇಕಿತ್ತು. ಯಾರ ಮಾತನ್ನೂ ಕೇಳದೆ ದಾಳಿ ಮುಂದುವರಿಸಿ ಪಾಕಿಸ್ತಾನವನ್ನು ನಾಶ ಮಾಡಬೇಕಿತ್ತು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಮಾಧ್ಯಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಬೆಳ್ಳಿಮಹೋತ್ಸವದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ನಂಬಿಕೆಗೆ ಅರ್ಹವಾದ ದೇಶವಲ್ಲ. ಕದನ ವಿರಾಮದ ನಂತರವೂ ಮತ್ತೆ ದಾಳಿ ಮಾಡಿದ್ದಾರೆ. ಅವರು ನಮ್ಮ ದೇಶದ ವೈರಿಗಳು. ಅವರಿಂದ ದೇಶಕ್ಕೆ ಎಂದೂ ಒಳ್ಳೆಯದಾಗುವುದಿಲ್ಲ. ಬೇರೆಯವರ ಮಾತು ಕೇಳಿ ಕಾರ್ಯಾಚರಣೆ ನಿಲ್ಲಿಸಬಾರದಿತ್ತು’ ಎಂದು ಅಸಮಾಧಾನ ಹೊರಹಾಕಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದಿರುವ ಸಂಘರ್ಷದ ಸಂಧಾನಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಮಧ್ಯಸ್ಥಿಕೆ ವಹಿಸಲು ಅವರು ಯಾರು? ಅವರ ದೇಶದ ವಿಚಾರದಲ್ಲಿ ಮೋದಿಯವರು ಏನನ್ನಾದರು ಹೇಳಿದರೆ ಕೇಳ್ತಾರೇನು? ಟ್ರಂಪ್‌ ಮಾತು ಕೇಳಿದ್ದು ತಪ್ಪು’ ಎಂದರು. 

ADVERTISEMENT

‘ಭಯೋತ್ಪಾದಕರ ವಿಚಾರದಲ್ಲಿ ಎಲ್ಲ ದೇಶಗಳೂ ಒಂದಾಗಿ ಶೃಂಗ ಸಭೆ ನಡೆಸಿ, ಭಯೋತ್ಪಾದನೆ ನಾಶಗೊಳಿಸಿ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.