ಪ್ರಜಾವಾಣಿ ವಾರ್ತೆ
ಬೆಳಗಾವಿ: ‘ಇಲ್ಲಿನ ಕೆಎಲ್‍ಇ ಸಂಸ್ಥೆಯ ಡಾ.ಎಂ.ಎಸ್.ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್(ಐಇಇಇ) ಉತ್ತರ ಕರ್ನಾಟಕ ವಲಯವು ನ.19ರಂದು ಅಂತರರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನ ಹಮ್ಮಿಕೊಂಡಿದೆ’ ಎಂದು ಐಇಇಇಯ ಉತ್ತರ ಕರ್ನಾಟಕ ವಲಯದ ಚೇರ್‌ಪರ್ಸನ್ ಕೃಪಾ ರಸಾನೆ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟನೆಯಾಗಲಿದೆ. ಅತಿಥಿಯಾಗಿ ಸಿಂಗಾಪುರದ ಸಂಶೋಧಕ ದೀಪಕ್ ವೈಕಾರ್ ಆಗಮಿಸುವರು. ಗೌರವ ಅತಿಥಿಗಳಾಗಿ ಬೆಂಗಳೂರಿನ ಐಐಬಿಟಿಯ ನಿರ್ದೇಶಕ ದೇಬಬ್ರತ ದಾಸ್, ಯು.ಆರ್.ರಾವ್ ಸೆಟ್‌ಲೈಟ್ ಸೆಂಟರ್‌ನ ಮುಖ್ಯಸ್ಥ ಪುನೀತ್‍ಕುಮಾರ್ ಮಿಶ್ರಾ ಆಗಮಿಸುವರು. ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್ ಎಸ್.ಸಿ.ಮೆಟಗುಡ್ಡ ಅಧ್ಯಕ್ಷತೆ ವಹಿಸುವರು’ ಎಂದು ತಿಳಿಸಿದರು.
‘ಕಳೆದ ವರ್ಷ ವಿಜಯಪುರದಲ್ಲಿ ಸಮ್ಮೇಳನದಲ್ಲಿ ನಡೆದಿತ್ತು. ‘ದಿ ಆರ್ಟ್ ಆಫ್ ಎಂಜಿನಿಯರಿಂಗ್, ಮಾಸ್ಟರಿಂಗ್ ಇನ್ನೋವೇಷನ್ ಆ್ಯಂಡ್ ಇಮ್ಯಾಜಿನೇಷನ್’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ಬೆಳಗಾವಿಯಲ್ಲಿ ನಡೆಯುತ್ತಿದೆ. ವಿವಿಧ ರಾಜ್ಯಗಳು ಹಾಗೂ ವಿದೇಶದ ತಾಂತ್ರಿಕ ಮತ್ತು ಪಿಎಚ್.ಡಿ ವಿಭಾಗದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಂಶೋಧಕರು, ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದು, ಸುಮಾರು 200 ಸಂಶೋಧನಾ ಪ್ರಬಂಧ ಮಂಡನೆಯಾಗುವ ನಿರೀಕ್ಷೆಯಿದೆ. ಇದೆ. ಅವುಗಳನ್ನು ಆಧರಿಸಿ, ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಲಿದೆ’ ಎಂದು ತಿಳಿಸಿದರು.
ಪ್ರಾಚಾರ್ಯ ಎಸ್.ಎಫ್.ಪಾಟೀಲ, ಡಾ.ರಾಖಿ ಕಳ್ಳಿಮನಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.