ADVERTISEMENT

ರೈತರಿಗೆ ₹600 ಕೋಟಿ ಬಡ್ಡಿರಹಿತ ಸಾಲ: ಶಾಸಕ ಲಕ್ಷ್ಮಣ ಸವದಿ

ಕರಿಯೋಗಿ ಸಿದ್ಧ ಸಂಘ ಉದ್ಘಾಟನೆ: ಶಾಸಕ ಲಕ್ಷ್ಮಣ ಸವದಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 14:30 IST
Last Updated 4 ಜುಲೈ 2025, 14:30 IST
ಕಾಗವಾಡ ತಾಲ್ಲೂಕಿನ ಕವಲಗುಡ್ಡ ಗ್ರಾಮದಲ್ಲಿ ಕರಿಯೋಗಿ ಸಿದ್ಧ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವನ್ನು ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಈಚೆಗೆ ಉದ್ಘಾಟಿಸಿದರು
ಕಾಗವಾಡ ತಾಲ್ಲೂಕಿನ ಕವಲಗುಡ್ಡ ಗ್ರಾಮದಲ್ಲಿ ಕರಿಯೋಗಿ ಸಿದ್ಧ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವನ್ನು ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಈಚೆಗೆ ಉದ್ಘಾಟಿಸಿದರು   

ಕಾಗವಾಡ: ‘ತಾಲ್ಲೂಕು ಹಾಗೂ ಅಥಣಿಯಲ್ಲಿ 156 ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಡ್ಡಿ ರಹಿತವಾಗಿ ₹600 ಕೋಟಿ ಸಾಲವನ್ನು ರೈತರಿಗೆ ನೀಡಲಾಗಿದೆ’ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲ್ಲೂಕಿನ ಕವಲಗುಡ್ಡ ಗ್ರಾಮದಲ್ಲಿ ಕರಿಯೋಗಿ ಸಿದ್ಧ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.

‘ರೈತರು ಕೃಷಿ ಸಹಕಾರ ಸಂಘದಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಬೇಕು. ಈ ಮೂಲಕ ಗ್ರಾಮೀಣ ಭಾಗದ ಸಹಕಾರ ಸಂಘಗಳ ಬೆಳೆವಣಿಗೆಗೆ ಸಹಕರಿಸಬೇಕು’ ಎಂದರು.

ADVERTISEMENT

‘ನಮ್ಮ ತಾಲ್ಲೂಕಿನ ರೈತರು ಹಾಗೂ ಸಹಕಾರ ಸಂಘಗಳ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ಸಾಲ ವಸೂಲಾತಿಯಲ್ಲಿ ಶೇ 100ರಷ್ಟು ಸಾಧನೆ ಸಾಧ್ಯವಾಗಿದೆ. ಸಿದ್ಧಶ್ರೀ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಪ್ರಾರಂಭವಾದ ಕರಿಯೋಗಿ ಸಿದ್ಧ ಗ್ರಾಮೀಣ ಸಹಕಾರ ಸಂಘದಿಂದ 150 ರೈತರಿಗೆ ₹75 ಸಾವಿರದಂತೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ’ ಎಂದು ಹೇಳಿದರು.

ವಿನಾಯಕ ಬಾಗಡಿ, ಶಂಕರ ವಾಘಮೋಡೆ, ಬಾಬು ಮೇಂಡಿಗೆರಿ, ಹಣಮಂತ ಸಂಬೋಜಿ, ಮಹಾದೇವ ಉಳ್ಳಾಗಡ್ಡಿ, ಶಂಕರ ನಂದೇಶ್ವರ, ರಾವಸಾಬ್‌ ಕಾಳೇಲಿ, ಎ.ಬಿ. ಪಾಟೀಲ, ಮಹಾದೇವ ಮಾಳಿ, ದೇವಪ್ಪ ಮಾನಗಾಂವೆ, ನಿಜಗುಣಿ ಮಗದುಮ್ಮ, ಅಪ್ಪಾಸಾಬ್‌ ಚೌಗಲಾ ಇದ್ದರು.

ರೈತರು ಪ್ರಗತಿ ಸಾಧಿಸಲು ಸಲಹೆ

‘ರೈತರು ಸಹಕಾರ ಸಂಘದಿಂದ ಪಡೆದ ಸಾಲವನ್ನು ಸರಿಯಾದ ಕೆಲಸಗಳಿಗೆ ಉಪಯೋಗಿಸಿ ಪ್ರಗತಿ ಹೊಂದಬೇಕು. ಅಮರೇಶ್ವರ ಮಹಾರಾಜರು ಬಡಮಕ್ಕಳ ಶಿಕ್ಷಣ ಹಾಗೂ ರೈತರಿಗೆ ಅನುಕೂಲಕ್ಕಾಗಿ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದ್ದಾರೆ’ ಎಂದು ಶಾಸಕ ರಾಜು ಕಾಗೆ ಹೇಳಿದರು.  ಸಾನ್ನಿಧ್ಯ ವಹಿಸಿ ಮಾತನಾಡಿದ ಕವಲಗುಡ್ಡದ ಅಮರೇಶ್ವರ ಮಹಾರಾಜರು ‘ರೈತರು  ಪ್ರಗತಿ ಹೊಂದಿ ಸಂಘವನ್ನು ಮುನ್ನಡೆಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.