ADVERTISEMENT

ನಿರಾಶ್ರಿತರೊಂದಿಗೆ ಕರ್ನಾಟಕ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 14:46 IST
Last Updated 1 ನವೆಂಬರ್ 2019, 14:46 IST
ಗೋಕಾಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದಿಂದ ನಿರಾಶ್ರಿತರ ಶೆಡ್‌ಗಳಲ್ಲಿ ಶುಕ್ರವಾರ ಆಯೋಜಿಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವವನ್ನು ಉಪ್ಪಾರಟ್ಟಿಯ ನಾಗೇಂದ್ರ ಸ್ವಾಮೀಜಿ ಉದ್ಘಾಟಿಸಿದರು
ಗೋಕಾಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದಿಂದ ನಿರಾಶ್ರಿತರ ಶೆಡ್‌ಗಳಲ್ಲಿ ಶುಕ್ರವಾರ ಆಯೋಜಿಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವವನ್ನು ಉಪ್ಪಾರಟ್ಟಿಯ ನಾಗೇಂದ್ರ ಸ್ವಾಮೀಜಿ ಉದ್ಘಾಟಿಸಿದರು   

ಗೋಕಾಕ: ‘ಪ್ರಕೃತಿ ವಿಕೋಪಗಳು ಮನಕುಲಕ್ಕೆ ಪಾಠವಾಗಿವೆ’ ಎಂದು ಸಾಹಿತಿ ಡಾ.ಸಿ.ಕೆ. ನಾವಲಗಿ ಹೇಳಿದರು.

ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲ್ಲೂಕು ಘಟಕದಿಂದ ಹೊರವಲಯದಲ್ಲಿ ನಿರಾಶ್ರಿತರಿಗೆ ನಿರ್ಮಿಸಿದ ತಾತ್ಕಾಲಿಕ ಶೆಡ್‌ಗಳಲ್ಲಿ ನಡೆದ ‘ನಿರಾಶ್ರಿತರೊಂದಿಗೆ ರಾಜೋತ್ಸವ ಹಾಗೂ ಅನ್ನಸಂತರ್ಪಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಬುದ್ಧಿಶಕ್ತಿಗೂ ಮೀರಿ ಪ್ರಕೃತಿಯು ಮುನಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಸುನಾಮಿ, ಭೂಕಂಪ, ಅತಿವೃಷ್ಟಿ, ಆನಾವೃಷ್ಟಿ ಸಂಭವಿಸಿ ಮನಕುಲವನ್ನು ಸರ್ವನಾಶಗೊಳಿಸುತ್ತದೆ. ಪ್ರಕೃತಿ ವಿಕೋಪಗಳನ್ನು ವಿಜ್ಞಾನ, ತಂತ್ರಜ್ಞಾನ ಬಳಸಿ ತಡೆಯಲು ನಮ್ಮ ವಿಜ್ಞಾನಿಗಳು ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಬುದ್ಧಿಜೀವಿಗಳಾದ ನಾವು ಅವರಿಗೆ ನೆರವಾಗಬೇಕು. ಸಸಿಗಳನ್ನು ನೆಟ್ಟು ಉಳಿಸಿ, ಬೆಳೆಸಿ ಸುತ್ತಮುತ್ತಲಿನ ಪರಿಸರ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಉಪ್ಪಾರಟ್ಟಿಯ ನಾಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರವೇ ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ ಖಾನಪ್ಪನವರ ಅಧ್ಯಕ್ಷತೆ ವಹಿಸಿದ್ದರು.

ಲಲಿತಕಲಾ ಅಕಾಡೆಮಿ ಸದಸ್ಯರಾಗಿ ನೇಮಕವಾಗಿರುವ ಸಾಹಿತಿ ಜಯಾನಂದ ಮಾದರ ಅವರನ್ನು ಗೌರವಿಸಲಾಯಿತು.

ಸಾಹಿತಿ ಮಹಾಲಿಂಗ ಮಂಗಿ, ಬಿಇಒ ಜಿ.ಬಿ. ಬಳಗಾರ, ಪಶುವೈದ್ಯಾಧಿಕಾರಿ ಡಾ.ಮೋಹನ ಕಮತ, ಮುಖ್ಯ ವೈದ್ಯಾಧಿಕಾರಿ ಡಾ.ಅಂಟಿನ, ಸಿಪಿಐ ಶ್ರೀಧರ ಸತಾರೆ, ಸಾದಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ, ಮುಗುಟ ಪೈಲವಾನ, ದೀಪಕ ಹಂಜಿ, ಕೆಂಪಣ್ಣಾ ಕಡಕೋಳ, ಮಂಜು ಪ್ರಭುನಟ್ಟಿ ಇದ್ದರು.

ಶಿಕ್ಷಕ ಟಿ.ಬಿ. ಬಿಲ್ಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.