ADVERTISEMENT

‘ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರದಲ್ಲಿ ವಿವಾದಿತ ಪುಸ್ತಕ ಬಿಡುಗಡೆ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 15:35 IST
Last Updated 27 ಜನವರಿ 2021, 15:35 IST
ಗೋಕಾಕದಲ್ಲಿ ಕರವೇ ಕಾರ್ಯಕರ್ತರು ‘ಮಹಾರಾಷ್ಟ್ರ-ಕರ್ನಾಟಕ ಸೀಮಾವಾದ್: ಸಂಘರ್ಷ್ ಅನಿ ಸಂಕಲ್ಪ್‌’ ಪುಸ್ತಕದ ಮುಖಪುಟವನ್ನು ಸುಟ್ಟು ಬುಧವಾರ ಪ್ರತಿಭಟನೆ ನಡೆಸಿದರು
ಗೋಕಾಕದಲ್ಲಿ ಕರವೇ ಕಾರ್ಯಕರ್ತರು ‘ಮಹಾರಾಷ್ಟ್ರ-ಕರ್ನಾಟಕ ಸೀಮಾವಾದ್: ಸಂಘರ್ಷ್ ಅನಿ ಸಂಕಲ್ಪ್‌’ ಪುಸ್ತಕದ ಮುಖಪುಟವನ್ನು ಸುಟ್ಟು ಬುಧವಾರ ಪ್ರತಿಭಟನೆ ನಡೆಸಿದರು   

ಗೋಕಾಕ: ‘ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದರೂ ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಸರ್ಕಾರ ಕನ್ನಡಿಗರ ಭಾವನೆಗಳಿಗೆ ಆಗಾಗ ಧಕ್ಕೆ ತರುತ್ತಿರುವುದು ಖಂಡನೀಯ’ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಬಿಡುಗಡೆಯಾದ ವಿವಾದಿತ ‘ಮಹಾರಾಷ್ಟ್ರ-ಕರ್ನಾಟಕ ಸೀಮಾವಾದ್: ಸಂಘರ್ಷ್ ಅನಿ ಸಂಕಲ್ಪ್‌’ ಪುಸ್ತಕದ ಮುಖಪುಟವನ್ನು ಸುಟ್ಟು ಪ್ರತಿಭಟನೆ ನಡೆಸಿದ ವೇಳೆ ಅವರು ಮಾತನಾಡಿದರು.

‘ಕರ್ನಾಟಕ–ಮಹಾರಾಷ್ಟ್ರ ಭಾಷಿಗರ ಬಾಂಧವ್ಯದಲ್ಲಿ ಹುಳಿ ಹಿಂಡುವಂತಹ ಕಾರ್ಯವನ್ನು ಪುಸ್ತಕ ಬಿಡುಗಡೆ ಮೂಲಕ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವಿವಾದಿತ ಪುಸ್ತಕವನ್ನು ನಿಷೇಧಿಸಬೇಕು. ಮುಖ್ಯಮಂತ್ರಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲೇ ಒಬ್ಬ ಐಎಎಸ್ ಹುದ್ದೆಯ ವಿಶೇಷ ಕರ್ತವ್ಯಾಧಿಕಾರಿ ನೇಮಿಸಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರವೂ ಗಡಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತವಾಗಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕಾರ್ಯಕರ್ತರಾದ ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಮುಗುಟ ಪೈಲ್ವಾನ್, ರಮೇಶ ಕಮತಿ, ಶೆಟ್ಟೆಪ್ಪ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ಕಿರಣ ತೊಗರಿ, ಅಶೋಕ ಬಂಡಿವಡ್ಡರ, ಬಸು ಗಾಡಿವಡ್ಡರ, ರಾಮ ಕುಡೆಮ್ಮಿ, ಶೆಟ್ಟೆಪ್ಪ ಡಬಾಜ, ರಾಮ ಕೊಂಗನ್ನೊಳ್ಳಿ, ಈರಪ್ಪಾ ಕೋಳಿ, ಬಸು ತೇಲಿ, ನಾಗರಾಜ ಬಂಡಿವಡ್ಡರ, ದುರ್ಗಪ್ಪಾ ಬಂಡಿವಡ್ಡರ, ಗಣಪತಿ ಜಾಗನೂರ, ಮಾಳಪ್ಪ ಮಾಳೇದರ, ಮಾಳಪ್ಪ ಹಣಜಿ, ಹಣಮಂತ ಕಮತಿ, ವಿಠ್ಠಲ ನಾಯಿಕ, ಆನಂದ ಬಿರಡಿ, ಹಣಮಂತ ಅಮ್ಮಣಗಿ, ಮೌನೇಶ ಲೋಣಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.