ಬೆಳಗಾವಿ: ಇಲ್ಲಿನ ಖಾಸಗಿ ಹೋಟೆಲ್‌ವೊಂದರಲ್ಲಿ ಶುಕ್ರವಾರ ರಾತ್ರಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಅವರು ಪ್ರತ್ಯೇಕವಾಗಿ ಗೋಪ್ಯ ಸಭೆ ನಡೆಸಿದರು.
ಅರ್ಧ ತಾಸು ಸಭೆಯಲ್ಲಿ ಚರ್ಚಿಸಿದ ಮೂವರೂ ನಾಯಕರು, ಬಳಿಕ ಒಂದೇ ವಾಹನದಲ್ಲಿ ಹೋಟೆಲ್‌ನಿಂದ ವಿಜಯಾ ಆಸ್ಪತ್ರೆಗೆ ತೆರಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆರೋಗ್ಯ ವಿಚಾರಿಸಿದರು.
ಇದಕ್ಕೂ ಮುನ್ನ ಸುರ್ಜೇವಾಲ ಅವರು ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಹೀಗಾಗಿ, ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆಸಿದ ಸಭೆ ಕುತೂಹಲ ಕೆರಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.