ADVERTISEMENT

ಬೆಳಗಾವಿ: ₹500ರ ನೋಟುಗಳನ್ನು ತೂರಿ ಸಂಭ್ರಮಾಚರಿಸಿದ ಲಖನ್ ಜಾರಕಿಹೊಳಿ ಬೆಂಬಲಿಗ!

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 16:09 IST
Last Updated 14 ಡಿಸೆಂಬರ್ 2021, 16:09 IST
₹500ರ ನೋಟುಗಳನ್ನು ತೂರಿ ಸಂಭ್ರಮಾಚರಿಸಿದ ಲಖನ್ ಜಾರಕಿಹೊಳಿ ಬೆಂಬಲಿಗ!
₹500ರ ನೋಟುಗಳನ್ನು ತೂರಿ ಸಂಭ್ರಮಾಚರಿಸಿದ ಲಖನ್ ಜಾರಕಿಹೊಳಿ ಬೆಂಬಲಿಗ!   

ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅಭಿಮಾನಿಗಳು ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸುವ ವೇಳೆ‌, ಬೆಂಬಲಿಗರೊಬ್ಬರು ₹500 ಮುಖಬೆಲೆಯ ನೋಟುಗಳನ್ನು ಗಾಳಿಗೆ ತೂರಿ ಸಂಭ್ರಮಿಸಿದ್ದಾರೆ.

ಆ ವ್ಯಕ್ತಿ ಯಾರು ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ, ಅವರು ನೋಟನ್ನು ತೂರಿದ್ದನ್ನು ಸ್ಥಳೀಯರೊಬ್ಬರು ವಿಡಿಯೊ ಮಾಡಿದ್ದಾರೆ. ಸಾವಿರಾರು ರೂಪಾಯಿಯನ್ನು ಅವರು ಎಸೆದರು. ಅದನ್ನು ಆಯ್ದುಕೊಳ್ಳಲು ಕೆಲವರು ಮುಗಿಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.