ADVERTISEMENT

ಯುವಜನರಲ್ಲಿ ಹೆಚ್ಚಿದ ಮೂತ್ರಪಿಂಡ ರೋಗ : ಡಾ.ವಿಶ್ವನಾಥ್ ಎಸ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:13 IST
Last Updated 4 ಮಾರ್ಚ್ 2026, 5:13 IST
ಬೆಳಗಾವಿಯ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಈಚೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ವತಿಯಿಂದ ಆಯೋಜಿಸಿದ್ದ ‘ಮಣಿಪಾಲ್ ಕಮ್ಯುನಿಟಿ ಕೇರ್’ ಕಾರ್ಯಕ್ರಮದಲ್ಲಿ ಡಾ.ವಿಶ್ವನಾಥ್ ಎಸ್., ಡಾ.ಆನಂದ ಪಾಟೀಲ, ಡಾ.ಗೋವಿಂದ ಮಿಸಾಳೆ, ಪ್ರಣವ ಕೃಷ್ಣ ಪಿತ್ರೆ ಹಲವರು ಪಾಲ್ಗೊಂಡರು
ಬೆಳಗಾವಿಯ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಈಚೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ವತಿಯಿಂದ ಆಯೋಜಿಸಿದ್ದ ‘ಮಣಿಪಾಲ್ ಕಮ್ಯುನಿಟಿ ಕೇರ್’ ಕಾರ್ಯಕ್ರಮದಲ್ಲಿ ಡಾ.ವಿಶ್ವನಾಥ್ ಎಸ್., ಡಾ.ಆನಂದ ಪಾಟೀಲ, ಡಾ.ಗೋವಿಂದ ಮಿಸಾಳೆ, ಪ್ರಣವ ಕೃಷ್ಣ ಪಿತ್ರೆ ಹಲವರು ಪಾಲ್ಗೊಂಡರು   

ಬೆಳಗಾವಿ: ‘ಬೌಗೋಳಿಕವಾಗಿ ಅತಿಯಾದ ಬಿಸಿಲು ಇರುವ ಪ್ರದೇಶಗಳಲ್ಲಿ ಮೂತ್ರಪಿಂಡ ರೋಗದ ಪ್ರಮಾಣ ಹೆಚ್ಚುತ್ತಿದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಈ ವರ್ಗಕ್ಕೆ ಸೇರುತ್ತವೆ’ ಎಂದು ಮಣಿಪಾಲ್ ಆಸ್ಪತ್ರೆ ನೆಫ್ರಾಲಜಿ ಮತ್ತು ಕಿಡ್ನಿ ಕಸಿ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ್ ಎಸ್. ಹೇಳಿದರು.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ಸಹಯೋಗದೊಂದಿಗೆ ನಗರದ ತಿಲಕವಾಡಿಯ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ‘ಮಣಿಪಾಲ್ ಕಮ್ಯುನಿಟಿ ಕೇರ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿರಂತರ ಬಿಸಿಲಿನಲ್ಲಿ ಕೆಲಸ ಮಾಡುವುದು ಅಥವಾ ಬದುಕುವುದು, ಅದರ ಜೊತೆಗೆ ಸಾಕಷ್ಟು ನೀರು ಕುಡಿಯದಿರುವುದು, ಇವುಗಳೊಟ್ಟಿಗೆ ಮಧುಮೇಹ ಅಥವಾ ರಕ್ತದೊತ್ತಡದಂತಹ ಸಮಸ್ಯೆಗಳೂ ಇರುವವರಲ್ಲಿ ಮೂತ್ರಪಿಂಡ ಹಾನಿ ಇನ್ನು ವೇಗವಾಗುತ್ತದೆ’ ಎಂದರು.

ADVERTISEMENT

ಭೌಗೋಳಿಕ ಅಂಶಗಳ ಜತೆಗೆ ಬಿಪಿ ಮತ್ತು ಮಧುಮೇಹ ಸೇರಿಕೊಂಡಾಗ ಅದು ಅಪಾಯಕಾರಿ ಆಗುತ್ತದೆ. ದೀರ್ಘಕಾಲೀನ ಮೂತ್ರಪಿಂಡ ವೈಫಲ್ಯಕ್ಕೆ ತಲುಪುತ್ತದೆ. ಕೊನೆಗೆ ಜೀವಮಾನಪೂರ್ತಿ ಡಯಾಲಿಸಿಸ್ ಮೇಲೆ ಅವಲಂಬಿತ ಆಗಬೇಕಾದ ಅಥವಾ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಮಾಡಿಸಬೇಕಾದ ಅನಿವಾರ್ಯ ಬರುತ್ತದೆ. ಸಕಾಲಿಕ ತಪಾಸಣೆ ಮತ್ತು ಚಿಕಿತ್ಸೆಯಿಂದ ಇದನ್ನು ತಡೆಗಟ್ಟಲು ಸಾಧ್ಯವಿದೆ’ ಎಂದು ಸಲಹೆ ನೀಡಿದರು.

‘ಬೆಳಗಾವಿ ಜಿಲ್ಲೆಯಲ್ಲೇ 60 ಸಾವಿರಕ್ಕೂ ಹೆಚ್ಚು ರಕ್ತದೊತ್ತಡ ಪ್ರಕರಣಗಳು, 50 ಸಾವಿರಕ್ಕೂ ಹೆಚ್ಚು ಮಧುಮೇಹ ಹಾಗೂ 3,000ಕ್ಕೂ ಹೆಚ್ಚು ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆ ಪ್ರಕರಣಗಳು ದಾಖಲಾಗಿದ್ದನ್ನು ಸರ್ಕಾರದ ವರದಿ ಹೇಳಿದೆ. ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದರು.

ಆಸ್ಪತ್ರೆಯ ಯೂರೋ-ಆಂಕಾಲಜಿ, ರೋಬೋಟಿಕ್ ಸರ್ಜರಿ ಮತ್ತು ಕಿಡ್ನಿ ಕಸಿ ತಜ್ಞ ಡಾ.ಆನಂದ ಪಾಟೀಲ ಮಾತನಾಡಿ, ‘ಧೂಮಪಾನವಾಗಲಿ, ತಂಬಾಕು ಸೇವನೆಯಾಗಲಿ, ಎರಡೂ ಮೂತ್ರಪಿಂಡ ಹಾನಿಯನ್ನು ವೇಗಗೊಳಿಸುತ್ತವೆ. ಹೆಚ್ಚುತ್ತಿರುವ ಅತಿಯಾದ ತೂಕವೂ ಇದಕ್ಕೆ ಕಾರಣ. ತಂಬಾಕು ಬಿಡುವುದು, ತೂಕವನ್ನು ನಿಯಂತ್ರಣದಲ್ಲಿ ಇಡುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಸರಳ ಕ್ರಮಗಳಾಗಿವೆ’ ಎಂದರು.

ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್‌ನ ಅಧ್ಯಕ್ಷ ಡಾ.ಗೋವಿಂದ ಮಿಸಾಳೆ, ಕಾರ್ಯದರ್ಶಿ ಪ್ರಣವ ಕೃಷ್ಣ ಪಿತ್ರೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.