ಸುತ್ತಲೂ ಬೆಟ್ಟ– ಗುಡ್ಡಗಳ ಸಾಲು, ಅದಕ್ಕೆ ಅಂಟಿಕೊಂಡು ಮೈಚಾಚಿದ ಹಸಿರು ವನಸಿರಿ. ಮಧ್ಯದಲ್ಲೊಂದು ಆಳವಾದ ವಿಶಾಲ ಕಂದಕ. ಸುತ್ತಲಿಂದ ಹನಿಹನಿಯಾಗಿ ಹರಿದು ಬರುವ ನೀರು ಏಕಾಏಕಿ ಜಲಪಾತವಾಗಿ ಭೋರ್ಗರೆಯುವ ಪರಿ. ಪ್ರಕೃತಿ ಮಾತೆ ಸೃಷ್ಟಿಸಿದ ವಿಸ್ಮಯದಂತೆ ಇದೆ ಈ ಜಲಪಾತ. ಆದರೆ ಇದು ನೈಸರ್ಗಿಕವಾಗಿ ಸೃಷ್ಟಿಯಾದ ಜಲಪಾತವಲ್ಲ. ಬೆಳಗಾವಿಯಿಂದ 18 ಕಿ.ಮೀ ದೂರದಲ್ಲಿರುವ ಕಿತವಾಡ ಜಲಪಾತ ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.