
ಬೈಲಹೊಂಗಲ: 'ವೀರರಾಣಿ ಕಿತ್ತೂರು ಚನ್ನಮ್ಮನ ಐಕ್ಯಸ್ಥಳ, ಜನ್ಮಸ್ಥಳ, ಸಂಸ್ಥಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ, ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು' ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ನಗರದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ 197ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ ಸಮಿತಿ ವತಿಯಿಂದ ಕಿತ್ತೂರು ಚನ್ನಮ್ಮನ ಜನ್ಮಸ್ಥಳ ಕಾಕತಿಯಿಂದ ಚನ್ನಮ್ಮನ ಐಕ್ಯ ಸ್ಥಳದವರೆಗೆ ಸೋಮವಾರ ನಡೆದ ಜ್ಯೋತಿ ಯಾತ್ರೆ ನೇತೃತ್ವ ವಹಿಸಿ ಮಾತನಾಡಿದರು.
'ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೆ ಬಲಿದಾನಗೈದ ವೀರರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಇದರಿಂದ ಯುವ ಜನಾಂಗಕ್ಕೆ ರಾಷ್ಟ್ರೀಯತೆ ಮತ್ತು ದೇಶಾಭಿಮಾನ ಮೈಗೂಡಿಸಲು ಪ್ರೇರಣೆ ಸಿಗಲಿದೆ. ಸರ್ಕಾರ ಚನ್ನಮ್ಮನ ಸ್ಮರಣೋತ್ಸವನ್ನು ಪ್ರತಿ ವರ್ಷ ದೇಶಾದ್ಯಂತ ಹಬ್ಬದಂತೆ ಆಚರಣೆ ಮಾಡುವ ಮೂಲಕ ಚನ್ನಮ್ಮನಿಗೆ ಗೌರವ ಸಮರ್ಪಿಸಬೇಕು ಎಂದರು. ಪಂಚಮಸಾಲಿ 2ಎ ಮೀಸಲಾತಿ ಆಗುವವರೆಗೂ ಹೋರಾಟ ಸಕ್ರಿಯವಾಗಿ ನಡೆಯಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, 'ಸರ್ಕಾರ ಇಚ್ಚಾ ಶಕ್ತಿ ತೋರಿಸಿ ಚನ್ನಮ್ಮನ ಜನ್ಮ ಭೂಮಿ, ಐಕ್ಯ ಸ್ಥಳದಲ್ಲಿ ಕುರುಹು ಪತ್ತೆ ಮಾಡಲು ಒಂದು ಸಂಶೋಧನಾ ಸಮಿತಿ ರಚಿಸಬೇಕು. ಚನ್ನಮ್ಮನ ಜನ್ಮಸ್ಥಳ, ಐಕ್ಯಸ್ಥಳ, ಆಯಾ ಕ್ಷೇತ್ರಕ್ಕೆ ಸೀಮಿತವಾಗಿರುವದು ಕಳವಳಕಾರಿ ಆಗಿದೆ. ಈ ಮೂರು ಕ್ಷೇತ್ರಗಳು ರಾಷ್ಟ್ರೀಯ ಸ್ಮಾರಕವಾಗಿಸಿ ಅಂತರಾಷ್ರ್ಟಿಯ ಮಟ್ಟದಲ್ಲಿ ಪರಿಚಯಿಸುವ ಕೆಲಸವಾಗಬೇಕು' ಎಂದರು.
ಲಿಂಗಾಯತ ಪಂಚಮಸಾಲಿ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳನ್ನವರ, ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಗುಂಡ್ಲೂರ, ಎಫ್.ಎಸ್.ಸಿದ್ದನಗೌಡರ, ಮಹೇಶ ಹರಕುಣಿ,
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಂಚಮಗೌಡ ದ್ಯಾಮಗೌಡರ, ನಿವೃತ್ತ ಅರಣ್ಯ ಅಧಿಕಾರಿ ಸಿ.ಬಿ.ಪಾಟೀಲ, ಗುಂಡು ಪಾಟೀಲ, ಚನ್ನಬಸಪ್ಪ ಬಾಗೇವಾಡಿ, ಬಿ.ಬಿ.ಬೋಗೂರ, ಶ್ರೀಕಾಂತ ಸುಂಕದ, ಕುಮಾರ ದಳವಾಯಿ, ಪರ್ವತಗೌಡ ಪಾಟೀಲ, ಬಿ.ಬಿ.ಸಂಗನಗೌಡರ, ಗಂಗಪ್ಪ ಗುಗ್ಗರಿ, ನಾಗಪ್ಪ ಮಾರಿಹಾಳ, ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗ ಸದಸ್ಯರು, ಅನೇಕರು ಜ್ಯೋತಿ ಯಾತ್ರೆಯೊಂದಿಗೆ ತೆರಳಿ ಯಶಸ್ವಿಗೊಳಿಸಿದರು. ಸಂಚಾಲಕ ರವಿ ಹುಲಕುಂದ ಕಾರ್ಯಕ್ರಮ ನಿರೂಪಿಸಿದರು. ಎಫ್.ಎಸ್.ಸಿದ್ದನಗೌಡರ ಸ್ವಾಗತಿಸಿದರು. ರಾಜು ಬಡಿಗೇರ ವಂದಿಸಿದರು.
ಜ್ಯೋತಿ ಯಾತ್ರೆಗೆ ಭವ್ಯ ಸ್ವಾಗತ: ಕಾಕತಿಯಿಂದ ಬೆಳಗಾವಿ, ಹಿರೇಬಾಗೇವಾಡಿ, ಕಿತ್ತೂರು, ಸಂಗೊಳ್ಳಿ, ಅಮಟೂರು ಮಾರ್ಗವಾಗಿ ನಗರಕ್ಕೆ ಬಂದು ಚನ್ನಮ್ಮನ ಲಿಂಗೈಕ್ಯ ಜ್ಯೋತಿ ಯಾತ್ರೆಗೆ ಗ್ರೇಡ್-2 ತಹಶಿಲ್ದಾರ ಬಾಹುರಾವ್ ಕುಲಕರ್ಣಿ, ನಗರ ಬಿ.ಐ. ನಗರಸಭೆ ವ್ಯವಸ್ಥಾಪಕ ಎಂ.ಆಯ್.ಕುಟ್ರಿ, ಬಿ.ಐ.ಗುಡಿಮನಿ, ಆರ್.ಎಸ್.ಹಿಟ್ಟಣಗಿ, ಕಂದಾಯ ನಿರೀಕ್ಷಕ ಬೋರಗಲ್, ಮುಖಂಡರಾದ ಶಂಕರ ಮಾಡಲಗಿ, ಸೋಮನಾಥ ಸೊಪ್ಪಿಮಠ, ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಮಹಾಂತೇಶ ಮತ್ತಿಕೊಪ್ಪ, ನಿಂಗಪ್ಪ ಚೌಡಣ್ಣವರ, ಚಂದ್ರಶೇಖರ ಕೊಪ್ಪದ, ನಾಗಪ್ಪ ಗುಂಡ್ಲೂರ, ಸುಭಾಸ ತುರಮರಿ, ನಾರಾಯಣ ನಲವಡೆ, ವೀರು ದೊಡ್ಡವೀರಪ್ಪನವರ, ಸಂತೋಷ ಹುಣಶೀಕಟ್ಟಿ, ಆನಂದ ತೋಟಗಿ, ಮಂಜುನಾಥ ಜ್ಯೋತಿ, ಯುನೂಸ್ ಬಡೇಘರ, ಈರಣ್ಣಾ ಮೇಲಿಕಟ್ಟಿ, ಬಸವರಾಜ ತಿಗಡಿ ಹಾಗೂ ಮಾಜಿ ಸೈನಿಕರು, ಕ್ರೀಯಾಶೀಲ ಸ್ವಾಭಿಮಾನಿ ಗೆಳೆಯರ ಬಳಗ, ಚನ್ನಮ್ಮನ ಅಭಿಮಾನಿ ಬಳಗದವರು ಸ್ವಾಗತ ಕೋರಿದರು.
ಚಿಕ್ಕೋಡಿ, ರಾಯಭಾಗ, ಗೋಕಾಕ, ಯರಗಟ್ಟಿ, ಸವದತ್ತಿ ತಾಲ್ಲೂಕು ಘಟಕ ಅಧ್ಯಕ್ಷರು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.