ADVERTISEMENT

ಗೋಕಾಕ: 55 ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:24 IST
Last Updated 13 ಜುಲೈ 2025, 5:24 IST
ಚಿತ್ರ: 12ಜಿಕೆಕೆ4 ಗೋಕಾಕದಲ್ಲಿ ಶನಿವಾರ ಕೆಎಲ್ಇ ಸಂಸ್ಥೆಯ ಐಟಿಐನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ನಿರ್ದೇಶಕ ಜಯಾನಂದ ಮುನವಳ್ಳಿ ಉದ್ಘಾಟಿಸಿದರು.
ಚಿತ್ರ: 12ಜಿಕೆಕೆ4 ಗೋಕಾಕದಲ್ಲಿ ಶನಿವಾರ ಕೆಎಲ್ಇ ಸಂಸ್ಥೆಯ ಐಟಿಐನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ನಿರ್ದೇಶಕ ಜಯಾನಂದ ಮುನವಳ್ಳಿ ಉದ್ಘಾಟಿಸಿದರು.   

ಗೋಕಾಕ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಕೆಎಲ್‌ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.

ಶನಿವಾರ ಕೆಎಲ್‌ಇ ಸಂಸ್ಥೆಯ ಇಲ್ಲಿನ ಐಟಿಐನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

 2004ರಲ್ಲಿ ನಗರದಲ್ಲಿ ಕೆಎಲ್‌ಇ ಸಂಸ್ಥೆಯಿಂದ ಪ್ರಾರಂಭಿಸಲಾದ ಐಟಿಐ ಕಾಲೇಜು ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಿ ಈ ಬಾರಿ ಬೆಂಗಳೂರಿನ ಟೊಯಟೊ ಕಿರ್ಲೋಸ್ಕರ್‌ಕಂಪನಿಗೆ 55 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಸಂತಸ ತಂದಿದೆ ಎಂದರು.

ADVERTISEMENT

ಹೆಸ್ಕಾಂನ ಘಟಪ್ರಭಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ನಿರಂಜನಗೌಡ ಮೂಡಲಗಿ ಅವರು ಮಾತನಾಡಿ, ತಾವು ಕಲಿತ ಜ್ಞಾನದ ಸದುಪಯೋಗದಿಂದ ವೃತ್ತಿ ಜೀವನದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಅರಭಾಂವಿಯ ಜಿಟಿಟಿಸಿ ಪ್ರಾಚಾರ್ಯ ಉಮೇಶ ಬಡಕುಂದ್ರಿ, ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಚೇರಮನ್‌ಮಲ್ಲಿಕಾರ್ಜುನ ಚುನಮರಿ, ಆಡಳಿತಾಧಿಕಾರಿ ಜಿ.ಎಂ.ಅಂದಾನಿ, ಪ್ರಾಚಾರ್ಯ ಮಂಜುನಾಥ ಕಂಬಾರ ಇದ್ದರು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.