ADVERTISEMENT

ಶ್ರೇಯಾಂಕ: ಕೆಎಲ್‌ಎಸ್‌ ಜಿಐಟಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 13:10 IST
Last Updated 5 ಜುಲೈ 2021, 13:10 IST

ಬೆಳಗಾವಿ: ಇಲ್ಲಿನ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜು (ಜಿಐಟಿ) ‘ಟೈಮ್ಸ್ ಎಂಜಿನಿಯರಿಂಗ್ ಶ್ರೇಯಾಂಕ 2021’ದಲ್ಲಿ ಭಾರತದ ಅತ್ಯುನ್ನತ 175 ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ.

ಈ ಶ್ರೇಯಾಂಕವು ಬೋಧನೆ, ಸಂಶೋಧನೆ, ಉಲ್ಲೇಖಗಳು, ಉದ್ಯಮದ ಆದಾಯ ಮತ್ತು ಅಂತರರಾಷ್ಟ್ರೀಯ ದೃಷ್ಟಿಕೋನ ಎಂಬ ಐದು ಪ್ರಮುಖ ಮಾನದಂಡಗಳನ್ನು ಕೇಂದ್ರೀಕರಿಸುತ್ತದೆ. ಹೋದ ವರ್ಷವೂ ಜಿಐಟಿ ಈ ಶ್ರೇಯಾಂಕದಲ್ಲಿ ಸ್ಥಾನ ಪಡೆದಿತ್ತು. ಈ ಸಾಧನೆಗಾಗಿ ಕಾಲೇಜನ್ನು ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT