ಬೆಳಗಾವಿ: ಇಲ್ಲಿನ ಟಿಳಕವಾಡಿಯ ಕೆಎಲ್‌ಎಸ್ ಗೋಗಟೆ ಪಿಯು ಕಾಲೇಜು ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 89ರಷ್ಟು ಫಲಿತಾಂಶ ಗಳಿಸಿದೆ.
45 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸ್ವಾತಿ ನಿಡೋಣಿ 1ನೇ , ದಿಶಾ ಕಿಣಿ ಹಾಗೂ ಶ್ರೇಯಸ್ ಕುಲಕರ್ಣಿ 2ನೇ, ಸೃಷ್ಟಿ ಸಾಳುಂಕೆ 3ನೇ, ಶ್ರೇಯಸ್ ಪಿ. ಕುಲಕರ್ಣಿ 4ನೇ, ಪ್ರೇರಣಾ ಹನುಮಸೇಠ್ 5ನೇ ಹಾಗೂ ಸಾಕ್ಷಿ ಬೋಹತ್ 6ನೇ ರ‍್ಯಾಂಕ್ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಸ್ಮಿತಾ ವಾಲಿ 1ನೇ, ಕಾದಂಬರಿ ತಹಶೀಲ್ದಾರ್ ಹಾಗೂ ಶುಭಾಂಗಿ ಸಾಗಾಂವಕರ 2ನೇ, ದೇವಶಿಶ್ ಲಾಡ್ 3ನೇ, ನಿಹಾರಿಕಾ ಎಸ್. 4ನೇ ಹಾಗೂ ಅನುಷಾ ವೆರ್ಣೇಕರ 5ನೇ ರ‍್ಯಾಂಕ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.