ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮದಭಾವಿಗೆ ಕಾಲಿಟ್ಟರೆ ಸಾಕು ನಿಮಗೆ ಚರ್ಮದ ವಾಸನೆ ಬಡಿಯುತ್ತದೆ. ಚರ್ಮದ ಚಪ್ಪಲಿಗಳ ತಯಾರಿಕೆಗೆ ಈ ಊರು ಪ್ರಸಿದ್ಧಿ ಪಡೆದಿದೆ. ಆದರೆ, ಇಲ್ಲಿ ತಯಾರಾಗುವ ಚಪ್ಪಲಿಗಳು, ‘ಕೊಲ್ಹಾಪುರೀಸ್’ ಹೆಸರಿನಲ್ಲಿ ಮಾರಾಟವಾಗುತ್ತಿವೆ. ಬೆಳಗಾವಿ ಅಥವಾ ಅಥಣಿ ಹೆಸರಿನಲ್ಲೇ ಅವುಗಳ ಬ್ರ್ಯಾಂಡಿಂಗ್ ಮಾಡಬೇಕು. ಲಿಡ್ಕರ್‌ನವರು ಅಂತರರಾಷ್ಟ್ರೀಯ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ನಮ್ಮ ಉತ್ಪನ್ನ ನಿಯಮಿತವಾಗಿ ಖರೀದಿಸಬೇಕು ಎಂಬುದು ಈ ಕುಶಲಕರ್ಮಿಗಳ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.