ADVERTISEMENT

ಬೆಳಗಾವಿ ಪೊಲೀಸರಿಗೆ ಮಹಾರಾಷ್ಟ್ರ ಪೊಲೀಸರ ಕೃತಜ್ಞತೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 4:39 IST
Last Updated 9 ಡಿಸೆಂಬರ್ 2022, 4:39 IST
   

ಸವದತ್ತಿ: ಹೊಸ್ತಿಲು ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡಕ್ಕೆ 145 ಬಸ್‌ಗಳಲ್ಲಿ ಬಂದಿದ್ದ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿ ಮರಳಿದ್ದಾರೆ. ಬೆಳಗಾವಿ ಪೊಲೀಸರ ಸಹಾಯದಿಂದಲೇ ಎಲ್ಲವರೂ ಶಾಂತ ರೀತಿಯಲ್ಲಿ ನಡೆದಿದೆ ಎಂದು ಮಹಾರಾಷ್ಟ್ರ ಪೊಲೀಸರು ಕೃತಜ್ಞತೆ ಸಲ್ಲಿಸಿದ್ದಾರೆ.

ಯಲ್ಲಮ್ಮನ ಗುಡ್ಡಕ್ಕೆ ಬರುವವರಲ್ಲಿ ಮಹಾರಾಷ್ಟ್ರದವರೇ ಹೆಚ್ಚು. ಗಡಿ ತಂಟೆ ತಾರಕಕ್ಕೇರಿದ ಕಾರಣ ಭಕ್ತರಲ್ಲಿ ಭಯ ಮನೆ ಮಾಡಿತ್ತು. ಭಕ್ತರ ಮೇಲೆ ಹಲ್ಲೆ ನಡೆದಿದೆ ಎಂದು ಕೆಲವು ಸಾಮಾಜಿಕ ಜಾಲತಾಣಗಳು ವದಂತಿ ಹರಡಿದ್ದವು. ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಗುಡ್ಡದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದರು.

ಬೆಳಗಾವಿ ಪೊಲೀಸರು ಮಹಾರಾಷ್ಟ್ರದ ಎಲ್ಲ ಬಸ್‌ಗಳಿಗೇ ಹಗಲು– ರಾತ್ರಿ ಕಾವಲು ಕಾವಲು ಕಾದರು. ಮಹಾರಾಷ್ಟ್ರದ ಪರವಾಗಿ ಧನ್ಯವಾದ ಎಂದು ಅಲ್ಲಿನ ಪೊಲೀಸರು ವಿಡಿಯೊ ಹರಿಬಿಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.