ADVERTISEMENT

‘ಮಹಾರಾಷ್ಟ್ರ ಉದ್ಭವವಾಗಿದ್ದೆ ಕನ್ನಡ ನೆಲದಿಂದ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 6:42 IST
Last Updated 19 ಜನವರಿ 2021, 6:42 IST
ಮಂಗಲಾ ಮೆಟಗುಡ್ಡ
ಮಂಗಲಾ ಮೆಟಗುಡ್ಡ   

ಬೆಳಗಾವಿ: ‘ಬೆಳಗಾವಿಯೂ ಐತಿಹಾಸಿಕ ಕಾಲದಿಂದಲೂ, ವರ್ತಮಾನದಲ್ಲೂ ಹಾಗೂ ಭವಿಷ್ಯದಲ್ಲೂ ಕನ್ನಡಿಗರದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಹಾಗೆ ನೋಡಿದರೆ ಇಂದಿನ ಮಹಾರಾಷ್ಟ್ರವು ಹಿಂದೊಮ್ಮೆ ಕನ್ನಡ ನೆಲವಾಗಿತ್ತು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದ್ದಾರೆ.

‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ‍ಪ್ರಕಟಣೆ ನೀಡಿರುವ ಅವರು, ‘ಮಹಾರಾಷ್ಟ್ರ ಹಾಗೂ ಮರಾಠಿ ಭಾಷೆ ಉದ್ಭವವಾಗಿದ್ದೆ ಕನ್ನಡ ನೆಲದಿಂದ. ಬೆಳಗಾವಿಯಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಗರು ಬಾಂಧವ್ಯದಿಂದ ಬದುಕುತ್ತಿದ್ದಾರೆ. ಸುಮ್ಮನೆ ಗಡಿತಂಟೆ ತೆಗೆದು ಜನರ ಭಾವನೆಗಳನ್ನು ಕೆಣಕುವುದು ಸರಿಯಲ್ಲ. ಮಹಾಜನ್ ವರದಿಯೇ ಅಂತಿಮವಾದುದು’ ಎಮದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT