ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಳಗಾವಿ: ನಗರದ ವಿವಿಧೆಡೆ ಶನಿವಾರ ಮಟ್ಕಾ ಆಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ರಾಮತೀರ್ಥ ನಗರದ ಸಾರ್ವಜನಿಕ ಸ್ಥಳದಲ್ಲಿ ಅದೇ ಪ್ರದೇಶದ ನಾಗಯ್ಯ ಮಠಪತಿ(48) ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿ, ₹3 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.
ಗಣಪತ ಗಲ್ಲಿಯಲ್ಲಿ ಮಾಳಿ ಗಲ್ಲಿಯ ಪ್ರಶಾಂತ ಹಿರೇಮಠ(38) ಅವರನ್ನು ಖಡೇ ಬಜಾರ್ ಠಾಣೆ ಪೊಲೀಸರು ಬಂಧಿಸಿ, ₹1,820 ನಗದು ವಶಪಡಿಸಿಕೊಂಡಿದ್ದಾರೆ.
ಹಳೇ ಪಿ.ಬಿ ರಸ್ತೆಯಲ್ಲಿ ಶಹಾಪುರದ ಆನಂದವಾಡಿಯ ಫಿರೋಜ್ ಪಿತಲಿವಾಲಿ(45), ಬಂಜಾರ ಗಲ್ಲಿಯ ಐಮನ್ ಚಿಕ್ಕೋಡಿ(32) ಎಂಬುವರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹4,100 ವಶಕ್ಕೆ ಪಡೆಯಲಾಗಿದೆ.
ಗಾಂಜಾ ಸೇವನೆ: ಒಬ್ಬನ ಬಂಧನ
ಬೆಳಗಾವಿ–ಸಾಂಬ್ರಾ ರಸ್ತೆಯಲ್ಲಿ ಅಮನ್ ನಗರ ಕ್ರಾಸ್ ಬಳಿ ಶನಿವಾರ ಗಾಂಜಾ ಸೇವಿಸುತ್ತಿದ್ದ ಹೊಸ ಗಾಂಧಿ ನಗರದ ಶಫಿಯುಲ್ಲಾ ಚೂರಿಖಾನ್(26) ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.