ADVERTISEMENT

ಎಂ.ಕೆ.ಹುಬ್ಬಳ್ಳಿಯಲ್ಲಿ ಭಾವೈಕ್ಯದ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 18:12 IST
Last Updated 8 ಆಗಸ್ಟ್ 2022, 18:12 IST
ಎಂ.ಕೆ.ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ವೈಭವದ ಮೊಹರಂ ಜರುಗಿತು.
ಎಂ.ಕೆ.ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ವೈಭವದ ಮೊಹರಂ ಜರುಗಿತು.   

ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಸೋಮವಾರ ಹಿಂದೂ- ಮುಸ್ಲಿಮರು ಭಾವೈಕ್ಯದಿಂದ ಮೊಹರಂ ಆಚರಿಸಿದರು. ಮಳೆಯಲ್ಲೂ ಭಕ್ತಿ ಸಮರ್ಪಿಸಿದರು.

ಇಲ್ಲಿನ ಪೇಟೆ ಓಣಿ ಮಸೀದಿ, ಮುಖ್ಯರಸ್ತೆ ಬಳಿ, ಗಾಂಧಿ‌ ನಗರ, ಪೀರಜಾದೆ ಗಲ್ಲಿ ಸೇರಿ ವಿವಿಧೆಡೆಐದು ದಿನಗಳ‌ ಕಾಲ ಪಂಜಾ ಪ್ರತಿಷ್ಠಾಪಿಸಲಾಗಿತ್ತು.

ಕಡೇ ದಿನವಾದ ಸೋಮವಾರ ರಾತ್ರಿ 10ರವರೆಗೆ ಪಂಜಾ ಹಾಗೂ ಡೋಲಿಗಳ‌ ಮೆರವಣಿಗೆ ನಡೆಯಿತು.

ADVERTISEMENT

ಭಕ್ತರು ಕೊಬ್ಬರಿ ಸುಟ್ಟರು. ಉತ್ತತ್ತಿ ಹಾರಿಸಿ ಭಕ್ತಿ ಸಮರ್ಪಿಸಿದರು.

ಹಲವರು ಒಣಕೊಬ್ಬರಿ, ದೀಪದ ಎಣ್ಣೆ, ಖಾರೀಕು ಅರ್ಪಿಸಿ ಭಕ್ತಿ ಮೆರೆದರು.

ಡೋಲಿಗಳು ಹೊಳೆಗೆ ಹೋಗುವವರೆಗೆ ತಡರಾತ್ರಿಯಲ್ಲೂ ಅಪಾರ ಜನ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.