ADVERTISEMENT

ಕಾಗವಾಡ | ಮೋಳೆ ಓಘ ಸಿದ್ದೇಶ್ವರ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:42 IST
Last Updated 9 ಫೆಬ್ರುವರಿ 2026, 5:42 IST
ಮೋಳೆ ಗ್ರಾಮದ ಸಿದ್ದೇಶ್ವರ ದೇವರ ಚಿತ್ರ.
ಮೋಳೆ ಗ್ರಾಮದ ಸಿದ್ದೇಶ್ವರ ದೇವರ ಚಿತ್ರ.   

ಕಾಗವಾಡ: ತಾಲ್ಲೂಕಿನ ಮೋಳೆ ಗ್ರಾಮದ ಓಘ ಸಿದ್ದೇಶ್ವರ ದೇವರ 11ನೇ ಬೃಹತ್ ದನಗಳ ಜಾತ್ರೆ ಫೆ.9ರಿಂದ 4 ದಿನಗಳವರೆಗೆ ನಡೆಯಲಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಭರತೇಶ ಪಡನಾಡ ತಿಳಿಸಿದರು.

ಅವರು ಭಾನುವಾರ ಮೋಳೆ ಗ್ರಾಮದಲ್ಲಿ ಮಾತನಾಡಿ, ಫೆ.9ರಂದು ಮಧ್ಯಾಹ್ನ 3 ಗಂಟೆಗೆ ವಿವಿಧ ಗ್ರಾಮಗಳ 5 ಪಲ್ಲಕ್ಕಿ ಕೂಡುತ್ತವೆ. ನಂತರ ವೈಭವದ ದೇವರುಗಳ ಭೇಟಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ವಿವಿಧ ಡೊಳ್ಳಿನ ಗಾಯನ ಸಂಘಗಳಿಂದ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯಲಿದೆ.

ಬುಧವಾರ ಬೆಳಿಗ್ಗೆ 6 ಗಂಟೆಗೆ ಓಘ ಸಿದ್ದೇಶ್ವರ ದೇವರ ಮಹಾಪೂಜೆ ಹಾಗೂ ನೈವೇದ್ಯ ನಡೆಯಲಿದೆ. ರಾತ್ರಿ 9 ಗಂಟೆಗೆ ಮಲ್ಲಿಕಾರ್ಜುನ ಹವ್ಯಾಸಿ ನಾಟ್ಯ ಸಂಘದಿಂದ ಅಣ್ಣ ಕೊಟ್ಟ ಮಾಂಗಲ್ಯ ನಾಟಕ ನಡೆಯಲಿದೆ. ಗುರುವಾರ ಬೆಳಿಗ್ಗೆ 9 ಗಂಟೆಗೆ ಒಂದು ಕುದುರೆ ಓಡಿಸುವ ಶರ್ಯತ್ತು, ಮಧ್ಯಾಹ್ನ 2 ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸಿರುವ ದೇವರ ಪಲ್ಲಕ್ಕಿಗಳ ಬೀಳ್ಕೊಡುವ ಸಮಾರಂಭ ನಡೆಯಲಿದೆ.

ADVERTISEMENT

ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಜೋಡು ಕುದುರೆ ಗಾಡಿ ಶರ್ಯತ್ತು ನಡೆಯಲಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಜೋಡೆತ್ತಿನ ಗಾಡಿ ಶರ್ಯತ್ತು ನಡೆಯಲಿದೆ. ನಾಲ್ಕು ದಿನಗಳವರೆಗೆ ಮಹಾ ಅನ್ನಪ್ರಸಾದ ಜರುಗುಲಿವೆ. ಜಾತ್ರೆಯಲ್ಲಿ ಕಲಬೆರಕೆ ಭಂಡಾರ ಬಳಕೆ ಸಂಪೂರ್ಣ ನಿಷೇಧವಿದೆ ಎಂದು ತಿಳಿಸಿದರು.

ಈ ವೇಳೆ ಜಾತ್ರಾ ಕಮಿಟಿ ಉಪಾಧ್ಯಕ್ಷ ಸಿದ್ದಪ್ಪ ಸೊಂದಕರ, ಸದಸ್ಯರಾದ ಬಾಳಪ್ಪ ನರಟ್ಟಿ, ಶ್ರೀಶೈಲ ಬಡಿಗೇರ,ಮುರಗೆಪ್ಪ ಹಳಮನಿ,ಬಸವರಾಜ ತೇಲಿ,ವಿಠೋಬಾ ಕೋಳೆಕರ, ಸುರೇಶ ಯರಂಡೋಲಿ, ಧರ್ಮಾಜಿ ಕೋಳೆಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.